ಮೈಸೂರು: ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವ ಅಂಗವಾಗಿ ಸಾಮೂಹಿಕ ವಿವಾಹ ಸುತ್ತೂರು ಶ್ರೀ ಕ್ಷೇತ್ರದಲ್ಲಿ ಸತ್ಸಂಪ್ರದಾಯದಂತೆ ನೆರವೇರಿತು. ಸುತ್ತೂರು ಪೀಠಾಧಿಪತಿ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಕಾಗಿನೆಲೆ ಕನಕಗುರು ಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ತಿರುವನಂತಪುರ ಶಾಂತಗಿರಿ ಆಶ್ರಮದ ಪ್ರಧಾನ ಕಾರ್ಯದರ್ಶಿಗಳಾದ ಸ್ವಾಮಿ ಗುರುರತ್ನಂ ಜ್ಞಾನತಪಸ್ವಿ ಸೇರಿದಂತೆ ಹರಗುರುಚರಮೂರ್ತಿಗಳ ದಿವ್ಯ ಸಾನಿಧ್ಯದಲ್ಲಿ 118 ಜೋಡಿಗಳು ದಾಂಪತ್ಯ ಬದುಕಿಗೆ ಕಾಲಿಟ್ಟರು. ವೀರಶೈವ ಲಿಂಗಾಯತ 04, ಪರಿಶಿಷ್ಟ ಜಾತಿ 61, ಪರಿಶಿಷ್ಟ ಪಂಗಡ 26, ಹಿಂದುಳಿದ ವರ್ಗ 18, ಅಂತರಜಾತಿ 11 ಸೇರಿದಂತೆ ಒಟ್ಟು 118 ಜೋಡಿಗಳು ಸತಿಪತಿಗಳಾದರು. ಒಟ್ಟು 118ರ ಪೈಕಿ ತಮಿಳುನಾಡಿನ ಜೋಡಿಗಳು 23, ವಿಶೇಷ ಚೇತನರು 04 ಹಾಗೂ ಒಂದು ಜೋಡಿ ಮರು ಮದುವೆ ಆಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.