ಮೈಸೂರು: ರಾಜ್ಯದಲ್ಲಿ ಬಿಜೆಪಿ ಬಂಡಾಯ ವಿಚಾರಕ್ಕೆ ಸಂಬಂಧಪಟ್ಟಂತೆ ಇನ್ನು ನಾಲ್ಕು ದಿನಗಳಲ್ಲಿ ಮ್ಯಾಜಿಕ್ ನಡೆಯಲಿದೆ ಎಂದು ಮೈಸೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಸೇರಿದಂತೆ ಎಲ್ಲಾ ಬಂಡಾಯವೂ ಇನ್ನೂ ನಾಲ್ಕು ದಿನದಲ್ಲಿ ಬಗೆ ಹರಿಯುತ್ತೆ. ಯಡಿಯೂರಪ್ಪ ಎಲ್ಲಾ ಕಡೆ ಹೋಗಿ ಭಿನ್ನ ಮತ ಶಮನ ಮಾಡುತ್ತಾರೆ. ಇನ್ನೂ ನಾಲ್ಕೆ ದಿನದಲ್ಲಿ ಆ ಮ್ಯಾಜಿಕ್ ಆಗುತ್ತೆ ನೋಡ್ತಾರಿ. ಪಕ್ಷದ ಎಲ್ಲಾ ನಿರ್ಧಾರಗಳನ್ನ ವಿಜಯೇಂದ್ರ ಯಡಿಯುರಪ್ಪ ತೆಗೆದುಕೊಳ್ಳಲು ಸಾಧ್ಯವಿಲ್ಲ. ಪಕ್ಷದ ಹೈಕಮಾಂಡ್ ನಿರ್ಧಾರಗಳೇ ಅಂತಿಮ. ಪಕ್ಷ ನಮ್ಮ ಮಾತುಗಳನ್ನು ಕೇಳಿಕೊಂಡು ಎಲ್ಲಾವನ್ನೂ ನಿರ್ಧಾರ ಮಾಡುತ್ತಿಲ್ಲ. ಪಕ್ಷ ಹೈಕಮಾಂಡ್ ನಾಯಕರಿಗೆ ಎಲ್ಲವೂ ಗೊತ್ತಿದೆ. ನರೇಂದ್ರ ಮೋದಿ ಅವರ ಅಲೇ ಮತ್ತು ನಾಯಕತ್ವಕ್ಕಾಗಿ ಪಕ್ಷದ ಎಲ್ಲಾ ನಾಯಕರು ಒಂದಾಗಿ ಕೆಲಸ ಮಾಡುತ್ತಾರೆ ಎಂದು ಹೇಳಿದರು.