ಬೆಂಗಳೂರು : ಈ ಬಾರಿ ಮೈಸೂರು-ಕೊಡಗು ಕ್ಷೇತ್ರದಿಂದ ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ ಕಣಕ್ಕಿಳಿಸಲು ಬಿಜೆಪಿ ಹೈಕಮಾಂಡ್ ಪ್ಲ್ಯಾನ್ ಮಾಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಹೀಗಾಗಿ ಸಂಸದ ಪ್ರತಾಪ್ ಸಿಂಹಗೆ ಟಿಕೆಟ್ ಕೈ ತಪ್ಪುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಸದ್ಯ ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದ್ದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ನೆಟ್ಟಿಗರು ತಿರುಗಿಬಿದ್ದಿದ್ದಾರೆ.
ಕರ್ನಾಟಕದಲ್ಲಿ ಹೊಂದಾಣಿಕೆ ರಾಜಕೀಯ ನಡೆಯುತ್ತಿದೆ. ಹೊಂದಾಣಿಕೆ ರಾಜಕೀಯದ ಕಳ್ಳ-ಮಳ್ಳ ಯಡಿಯೂರಪ್ಪ-ವಿಜಯೇಂದ್ರ ಎಂದು ಪೋಸ್ಟ್ ಹಾಕಿ ನೆಟ್ಟಿಗರು ಕಿಡಿಕಾರಿದ್ದಾರೆ. ಅಪ್ಪ-ಮಕ್ಕಳಿಗೆ ಯತ್ನಾಳ್ ಬೇಡ, ಸಿಟಿ ರವಿ ಬೇಡ, ಸೋಮಣ್ಣ ಬೇಡ, ಎನ್.ಆರ್. ರಮೇಶ್ ಬೇಡ, ಈಗ ಪ್ರತಾಪ್ ಸಿಂಹ ಬೇಡ, ಹಿಂದುತ್ವವೂ ಬೇಡ. ಎಲ್ಲವೂ ತನಗೆ ಮತ್ತು ತನ್ನ ಕುಟುಂಬಕ್ಕೆ ಬೇಕು ಅಂದರೆ. ಇನ್ನು ರಾಜ್ಯದಲ್ಲಿ ಹೇಗೆ ಬಿಜೆಪಿ ಬೆಳೆಯುತ್ತೆ ಸ್ವಾಮಿ ಎಂದು ವಿಜಯೇಂದ್ರ, ಯಡಿಯೂರಪ್ಪ ಭಾವಚಿತ್ರ ಹಾಕಿ ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.