ಮಂಡ್ಯ : ಹಸಿರಾಗಿದ್ದ ಮಂಡ್ಯ ಜಿಲ್ಲೆಯನ್ನ ಚಲುವರಾಯಸ್ವಾಮಿ ಸಂಪೂರ್ಣವಾಗಿ ಒಣಗಿಸಿದ್ದಾರೆ. ಕೃಷಿ ಸಚಿವರಾಗಿ ಮುಂದುವರಿಯಲು ಲಾಯಾಕ್ ಇಲ್ಲ ಎಂದು ಚಲುವರಾಯಸ್ವಾಮಿ ರಾಜಿನಾಮೆ ಗೆ ರವೀಂದ್ರ ಶ್ರೀಕಂಠಯ್ಯ ಆಗ್ರಹಿಸಿದ್ದಾರೆ. ಮಂಡ್ಯದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ವಿಷಾದದ ಪರಿಸ್ಥಿತಿಯಲ್ಲಿ ನಿಮ್ಮ ಮುಂದೆ ಬಂದಿದ್ದೇನೆ. ರೈತರ ಪರಿಸ್ಥಿತಿ ನರಕಕ್ಕೆ ಹೋಗಿದೆ. ಕಾಂಗ್ರೆಸ್ ಸರ್ಕಾರ ನಮ್ಮ ನೀರು ನಮ್ಮ ಹಕ್ಕು ಅಂತ ಹೋರಾಟ ಮಾಡಿ, ಜನರನ್ನ ದಿಕ್ಕು ತಪ್ಪಿಸಿ ಚುನಾವಣೆ ಎದುರಿಸಿದ್ರು. ನಮ್ಮ ನೀರು ತಮಿಳುನಾಡಿನ ಹಕ್ಕು ಆಗಿದೆ. ಮಂಡ್ಯ ಜಿಲ್ಲೆಯ ರೈತರ ಬದುಕು ಹಾಳಗಿದೆ. ಮುಖ್ಯಮಂತ್ರಿ ಒಂದು ಜಿಲ್ಲೆಗೆ ಬಂದಾದ ಕಾರ್ಯಕ್ರಮಕ್ಕೆ 2 ಕೋಟಿ ಖರ್ಚು ಮಾಡ್ತಿರಿ. ಗ್ಯಾರಂಟಿ ಬಗ್ಗೆ ತಿಳಿಸೋದಕ್ಕೆ ಈ ರೀತಿಯ ದುಡ್ಡು ಖರ್ಚು ಮಾಡ್ತೀರಿ. ಜಿಲ್ಲೆಯಲ್ಲಿ ಗ್ಯಾರಂಟಿಗಾಗಿ 9 ಕೋಟಿ ಹಣ ಖರ್ಚು ಮಾಡಿ ಯಾವ ಪುರುಷಾರ್ಥಕ್ಕೆ ಮಾಡಿದ್ರಿ? ಮಂಡ್ಯ ಜಿಲ್ಲೆಯ ಕೃಷಿ ಸಚಿವ ಚಲುವರಾಯಸ್ವಾಮಿಗೆ ರೈತರು ಶಾಪಾ ಹಾಕ್ತಿದ್ದಾರೆ. ಕೃಷಿ ಸಚಿವರಾಗಿ ಮುಂದುವರಿಯಲು ಲಾಯಾಕ್ ಇಲ್ಲ, ಯೋಗ್ಯತೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.