ಚಾಮರಾಜನಗರ : ಬಿಳಿಗಿರಿರಂಗನ ಬೆಟ್ಟ ಹುಲಿಸಂರಕ್ಷಿತ ಅರಣ್ಯದಲ್ಲಿ ಕಾಡಾನೆ ಮೃತಪಟ್ಟಿದೆ. ಚಾಮರಾಜನಗರ ಜಿಲ್ಲೆ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ಕೆಂಕೆರೆ ಕೆರೆ ಸಮೀಪ ಹೆಣ್ಣಾನೆ ಮೃತಪಟ್ಟಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ಸದ್ಯ ಹೆಣ್ಣಾನೆಯ ಮರಣೋತ್ತರ ಪರೀಕ್ಷೆ ನಡೆಸಿದ ಪಶು ವೈದ್ಯಾಧಿಕಾರಿಗಳು ಮರಣೋತ್ತರ ಪರೀಕ್ಷೆಯಲ್ಲಿ ಸಹಜವಾಗಿ ಮೃತಪಟ್ಟಿದೆ ಎಂದು ದೃಢಪಟ್ಟಿದೆ.