ಮೈಸೂರು : ಲಾರಿ ಮುಷ್ಕರಕ್ಕೆ ಮೈಸೂರಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಟ್ರಕ್ ಟರ್ಮಿನಲ್ನಲ್ಲೇ ಸರಕು ಸಾಗಣೆ ವಾಹನಗಳು ಠಿಕಾಣಿ ಹೂಡಿರುವುದರಿಂದ ಸಾಲುಗಟ್ಟಿ ನೂರಾರು ಲಾರಿಗಳು ನಿಂತಿವೆ. ಕರ್ನಾಟಕ ರಾಜ್ಯ ಲಾರಿ ಚಾಲಕರ ಸಂಘದಿಂದ ಬೆಂಬಲ ಸೂಚಿಸಲಾಗಿದ್ದು, ಇವರ ಜೊತೆಗೆ ಮೈಸೂರು ಜಿಲ್ಲಾ ಲಾರಿ ಮಾಲೀಕರು ಹಾಗೂ ಚಾಲಕರ ಒಕ್ಕೂಟದಿಂದಲೂ ಸಾಥ್ ನೀಡಲಾಗಿದೆ. ರಾತ್ರಿಯೇ ಟರ್ಮಿನಲ್ ನಲ್ಲಿ ಲಾರಿ ನಿಲ್ಲಿಸಿ ಪ್ರತಿಭಟನೆ ಲಾರಿ ಗ್ಲಾಸ್ ಗೆ ಕರಪತ್ರ ಅಂಟಿಸಿ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.