ಇಂಡಿಯಾ ಮೈತ್ರಿಕೂಟದಲ್ಲಿ ಮಹಾ ಬಿರುಕು ಉಂಟಾಗಿದ್ದು, ಭಿನ್ನಮತ ಸ್ಪೋಟವಾಗಿದೆ. ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ಟಿಎಂಸಿ ನಿರ್ಧರಿಸಿದೆ. ಈ ಮೂಲಕ ಇಂಡಿಯಾ ಮಿತ್ರಕೂಟಕ್ಕೆ ಭಾರೀ ದೊಡ್ದ ಹಿನ್ನಡೆಯಾಗಿದ್ದು, ಇಂಡಿಯಾ ಮಿತ್ರಕೂಟಕ್ಕೆ ಬೆಂಬಲ ನೀಡಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇದೀಗ ಲೋಕಸಭೆ ಚುನಾವಣೆಯಲ್ಲಿ ತಮ್ಮ ರಾಜ್ಯದಲ್ಲಿ ಟಿಎಂಸಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಹೇಳಿದ್ದಾರೆ. ಈ ಕುರಿತು ಮಾತನಾಡಿದ ಪಶ್ಚಿಮ ಬಂಗಾಳ ಸಿಎಂ ಹಾಗೂ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಲೋಕಸಭೆ ಚುನಾವಣೆಯಲ್ಲಿ ಏಕಾಂಗಿ ಸ್ಪರ್ಧೆಗೆ ಟಿ.ಎಂ.ಸಿ ನಿರ್ಧಾರ ಮಾಡಿದೆ. ಪ.ಬಂಗಾಳದಲ್ಲಿ ಯಾವುದೇ ಹೊಂದಾಣಿಕೆ ಇಲ್ಲ. ಟಿಎಂಸಿ ಯಾರೊಂದಿಗೂ ಮೈತ್ರಿ ಮಾಡಿಕೊಳ್ಳಲ್ಲ. ಟಿ.ಎಂ.ಸಿ ಯಾರ ಜತೆಗೂ ಕೈಜೋಡಿಸಲ್ಲ ಎಂದಿದ್ದಾರೆ.