ಮಂಡ್ಯ : ದೇಶ, ಭಾಷೆ, ನೆಲದ ವಿಚಾರ ಬಂದ್ರೆ ಯಾವುದೇ ಪಾರ್ಟಿ, ವ್ಯಕ್ತಿ ಇರಲಿ ರಾಜಿಯಾಗುವ ಪ್ರಶ್ನೆ ಇಲ್ಲ ಎಂದು ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ವಿಚಾರಕ್ಕೆ ಸಚಿವ ಎನ್.ಚಲುವರಾಯಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಮಾತನಾಡಿದ ಅವರು, ‘ಬಿಜೆಪಿಯವರಿಗೆ ಕ್ರಮ ಬೇಕಿಲ್ಲ, ಎಂಪಿ ಚುನಾವಣೆಗೆ ವಿಚಾರ ಬೇಕಷ್ಟೆ.’ ಪಾಕಿಸ್ತಾನ ಜಿಂದಾಬಾದ್ ಅಂತ ಯಾರೇ ಹೇಳಿದರು ಇದು ಸಹಿಸುವ ಪ್ರಶ್ನೆ ಇಲ್ಲ. ರಾಜಕಾರಣ ಬೆರಸುವು ವಿಚಾರ ಅಲ್ಲ. ಯಾವುದೇ ಪಾರ್ಟಿ, ವ್ಯಕ್ತಿ ಇರಲಿ ದೇಶ,ಭಾಷೆ,ನೆಲದ ವಿಚಾರ ಬಂದ್ರೆ ರಾಜಿಯಾಗುವ ಪ್ರಶ್ನೆ ಇಲ್ಲ. ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತೆವೆ. ಬಿಜೆಪಿಯವರಿಗೆ ಕ್ರಮ ಬೇಕಿಲ್ಲ, ಇಶ್ಯು ಬೇಕು. ಮುಂದೆ ಎಂಪಿ ಚುನಾವಣೆ ಇದೆ ಸದ್ಯಕ್ಕೆ ಪ್ರಮುಖ ವಿಚಾರವಾಗಿ ತೆಗೆದುಕೊಂಡಿದ್ದಾರೆ. ಸರ್ಕಾರ ಇದರ ಬಗ್ಗೆ ಗಂಭೀರವಾಗಿ ಕ್ರಮ ಕೈಗೊಳ್ಳುತ್ತೆ ಎಂದು ಹೇಳಿದರು.
ಇನ್ನು ಇದೇ ವೇಳೆ ಎಂಪಿ ಚುನಾವಣೆಗೆ ಸ್ಟಾರ್ ಚಂದ್ರು ಮಂಡ್ಯ ಕಣಕ್ಕೆ ವಿಚಾರಕ್ಕೆ ಮಾತನಾಡಿ ಪರಿಷತ್ತು ಸದಸ್ಯ ದಿನೇಶ್ ಗೂಳಿಗೌಡ ಕೂಡ ಹೊಸ ಮುಖನೇ. ನನಗೂ ಪರಿಚಯ ಇರಲಿಲ್ಲ. ಸ್ಟಾರ್ ಚಂದ್ರು ನಮ್ಮ ಜೊತೆಯಲ್ಲಿ ಇಲ್ಲದಿದ್ದರೂ ಪಕ್ಷಕ್ಕಾಗಿ ದುಡಿದ್ದಿದ್ದಾರೆ. ಅವರ ಅಣ್ಣ ಗೌರಿಬಿದನೂರಲ್ಲಿ ಶಾಸಕರಾಗಿ ನಮ್ಮ ಜೊತೆ ಇದ್ದಾರೆ. ಕಾಂಗ್ರೆಸ್ ನಿಂದಲೇ ಟಿಕೆಟ್ ಕೊಡಬೇಕಿತ್ತು ಅದ್ರೆ ಹಿರಿಯ ನಾಯಕರು ಇದ್ರು ಆಗಾಗಿ ಟಿಕೆಟ್ ಕೈ ತಪ್ಪಿ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದರು ನಮ್ಮ ಜೊತೆ ಇದ್ದಾರೆ.ನಮ್ಮ ಪಕ್ಷಕ್ಕೆ ಅವರ ಕುಟುಂಬ ಸಪೋರ್ಟ್ ಮಾಡಿದೆ ಎಂದರು.