ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಹಿನ್ನಲೆ ರಾಮನ ಫೊಟೋಗಳಿಗೆ ಬೇಡಿಕೆ ಹೆಚ್ಚಾಗಿದೆ. ಫೋಟೋ ಮಾರಾಟ ಮಳಿಗೆಗಳಲ್ಲಿ ರಾಮನ ಫೋಟೋಗೆ ಡಿಮ್ಯಾಂಡ್ ಹೆಚ್ಚಿದೆ. ರಾಮನ ಪೂಜೆ ಮಾಡಲು ಫೋಟೋ ಖರೀದಿಗೆ ಜನ ಮುಗಿಬಿದ್ದಿದ್ದಾರೆ. ಕೆಲ ಅಂಗಡಿಗಳಲ್ಲಿ ಫೋಟೋಗಳೇ ಸಿಗ್ತಿಲ್ಲ. ಕಳೆದ ನಾಲ್ಕೈದು ದಿನಗಳಲ್ಲಿ 300ಕ್ಕೂ ಹೆಚ್ಚು ಫೋಟೋ ಮಾರಾಟ ಮಾಡಿದ್ದೇವೆ ಎಂದು ಹುಬ್ಬಳ್ಳಿಯ ಅಂಗಡಿ ಮಾಲೀಕರೊಬ್ಬರು ತಿಳಿಸಿದ್ದಾರೆ. ಫೋಟೋಗಳ ಖರೀದಿ ಮಾಡಲು ಅಂಗಡಿ ಮುಂದೆ ಜನ ಜಮಾಯಿಸಿದ್ದಾರೆ. ಹುಬ್ಬಳ್ಳಿಯ ಪಾನ್ ಬಜಾರ್ ಬಳಿ ಇರುವ ಫೋಟೋ ಅಂಗಡಿ ಮುಂದೆ ಜನ ಸೇರಿದ್ದಾರೆ.