ಮೈಸೂರು: ಆಸ್ತಿ ವಿಚಾರಕ್ಕೆ ತಂದೆಗೆ ಮಗ ಚಾಕು ಹಾಕಿದ ಘಟನೆ ತಿ. ನರಸೀಪುರ ತಾಲೂಕಿನ ಆಲಗೂಡು ಗ್ರಾಮದಲ್ಲಿ ನಡೆದಿದೆ. ರಾಚಪ್ಪಾಜಿ (60) ಮಗನಿಂದಲೇ ಚಾಕು ಇರಿತಕ್ಕೆ ಒಳಗಾದ ವ್ಯಕ್ತಿಯಾಗಿದ್ದಾರೆ. ರಾಚಪ್ಪಾಜಿ ಪುತ್ರ ಸುಭಾಷ್ ಮತ್ತು ಆತನ ಸ್ನೇಹಿತರಿಂದ ಕೃತ್ಯ ನಡೆದಿದ್ದು, ರಾಚಪ್ಪಾಜಿ ಜತೆ ಇದ್ದ ಸ್ನೇಹಿತ ಮಹದೇವ್ ಗೂ ಆರೋಪಿಗಳು ಚಾಕು ಇರಿದಿದ್ದಾರೆ. ಗಂಭೀರ ಗಾಯಗೊಂಡ ರಾಚಪ್ಪಾಜಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆ.ಆರ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.