ಮೈಸೂರು : ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ತೆರವುಗೊಳಿಸಲು, ಪ್ರಯಾಣಿಕರ ಬೇಡಿಕೆಯ ಮೇರೆಗೆ ಮೈಸೂರು ಮತ್ತು ತಮಿಳುನಾಡಿನ ಮನಮಧುರೈ ನಿಲ್ದಾಣಗಳ ನಡುವೆ ಒಂದು ಟ್ರಿಪ್ ವಿಶೇಷ ರೈಲನ್ನು ಓಡಿಸಲು ನೈರುತ್ಯ ರೈಲ್ವೆ ನಿರ್ಧರಿಸಿದೆ. ಈ ವಿಶೇಷ ರೈಲು ಮಾರ್ಚ್ 11, 2024 ರಂದು ಮೈಸೂರು ನಿಲ್ದಾಣದಿಂದ ಸಂಜೆ 06:35 ಗಂಟೆಗೆ ಹೊರಟು ಮರುದಿನ ಬೆಳಗ್ಗೆ 09:10 ಗಂಟೆಗೆ ತಮಿಳುನಾಡಿನ ಮನಮದುರೈ ನಿಲ್ದಾಣವನ್ನು ತಲುಪಲಿದೆ. ಹಿಂದಿರುಗುವ ದಿಕ್ಕಿನಲ್ಲಿ, ಇದೇ ರೈಲು ಮಾರ್ಚ್ 12, 2024 ರಂದು ಮಧ್ಯಾಹ್ನ 12 ಗಂಟೆಗೆ ಮನಮಧುರೈ ನಿಲ್ದಾಣದಿಂದ ಹೊರಟು ಮರುದಿನ ಬುಧವಾರ ರಾತ್ರಿ 01:55 ಗಂಟೆಗೆ ಮೈಸೂರು ನಿಲ್ದಾಣಕ್ಕೆ ಆಗಮಿಸಲಿದೆ.