ಮೈಸೂರು: ಸಾಲ ವಾಪಸ್ಸು ಕೊಡಲಿಲ್ಲ ಅಂತ ವೀಡಿಯೋ ಮಾಡಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಯರಗನಹಳ್ಳಿ ಗ್ರಾಮದಲ್ಲಿ ನಡೆದಿದೆ.ವಿಶ್ವ(34), ಸುಷ್ಮಾ(28) ಆತ್ಮಹತ್ಯೆಗೆ ಶರಣಾದ ದಂಪತಿಗಳಾಗಿದ್ದಾರೆ. ಶಿವು ಎಂಬಾತನಿಗೆ ವಿಶ್ವ ಬೇರೊಬ್ಬರಿಂದ ಸುಮಾರು 5 ಲಕ್ಷ ರೂ. ಸಾಲ ಕೊಡಿಸಿದ್ದ ಆದರೆ ಶಿವು ಎಂಬಾತ ಕೊಟ್ಟ ಸಾಲವನ್ನು ಮರು ಪಾವತಿ ಮಾಡಿರಲಿಲ್ಲ. ಅಲ್ಲದೆ ಚೋರನಹಳ್ಳಿ ರಾಜಣ್ಣ ಎಂಬಾತನಿಗೆ ಚಿನ್ನಾಭರಣವನ್ನು ವಿಶ್ವ ಕೊಟ್ಟಿದ್ದು, ಆ ಚಿನ್ನವನ್ನು ವಾಪಸ್ಸು ಕೊಡದೆ ರಾಜಣ್ಣ ಸತಾಯಿಸಿದ್ದನಂತೆ. ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಅಪ್ಲೋಡ್ ಮಾಡಿ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು ಈ ಸಂಬಂಧ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.