ಮೈಸೂರು: ನಾಗರಹೊಳೆ ಅಭಯಾರಣ್ಯದಲ್ಲಿ ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಎರಡು ಹುಲಿಗಳು ದರ್ಶನ ಕೊಟ್ಟಿದ್ದು, ಸಫಾರಿಗೆ ತೆರಳಿದ್ದವರು ಫುಲ್ ಖುಷ್ ಆಗಿದ್ದಾರೆ. ಕಳೆದ ಸಂಜೆ ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಎರಡು ಹುಲಿಗಳು ಸಫಾರಿ ವಾಹನದ ಸನಿಹದಲ್ಲೇ ಸಾಗಿದ್ದು, ಹುಲಿಗಳು ಸಂಚರಿಸುತ್ತಿರುವ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.