ಚಾಮರಾಜನಗರ : ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಟೈಗರ್ ರಿಸರ್ವ್ ಫಾರೆಸ್ಟ್ನ ಅರಣ್ಯದಂಚಿನಲ್ಲಿರುವ ಶಿವಪುರ ಹೊರವಲಯದಲ್ಲಿ ಕುರಿಗಾಹಿಗಳ ಮೇಲೆ ಹುಲಿ ದಾಳಿ ನಡೆಸಿದ್ದು, ಇಬ್ಬರು ಕುರಿಗಾಹಿಗಳಿಗೆ ಗಾಯವಾಗಿರುವಂತಹ ಘಟನೆ ನಡೆದಿದೆ. ಶಿವಶೆಟ್ಟಿ(55), ಜವರಯ್ಯ(65) ಗಾಯಗೊಂಡವರು. ಮೊದಲಿಗೆ ಕುರಿಗಳ ಮೇಲೆ ಹುಲಿ ದಾಳಿ ನಡೆಸಿದ್ದು, ಕುರಿಯನ್ನು ರಕ್ಷಿಸಲು ಕುರಿಗಾಹಿಗಳು ಯತ್ನಿಸಿದಾಗ ಕುರಿಗಾಹಿಗಳ ಮೇಲೆ ದಾಳಿ ಮಾಡಿದೆ. ಇನ್ನು ಗಾಯಾಳುಗಳಿಗೆ ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.