ಕೆ.ಎಂ.ದೊಡ್ಡಿ: ಸಮೀಪದ ಮೆಳ್ಳಹಳ್ಳಿ ಶ್ರೀ ಶನೈಶ್ಚರಸ್ವಾಮಿಯ ೭೨ ನೇ ವರ್ಷದ ವಿಶೇಷ ಪೂಜಾ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು.
ಶನಿದೇವರ ಮೂರ್ತಿ ಮತ್ತು ದೇವಾಲಯವನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಬಾಯಿಬೀಗ, ಮುಡಿಸೇವೆ ಮತ್ತು ಶ್ರೀಶನೇಶ್ವರ ಸ್ವಾಮಿಯ ಪಲ್ಲಕ್ಕಿ ಉತ್ಸವ ವೈಭವದಿಂದ ಜರುಗಿತು.
ದೇವಾಲಯದ ಪ್ರಧಾನ ಅರ್ಚಕ ಪೂಜಾರಿ ಮಹೇಶ್ ಮತ್ತು ಅರ್ಚಕ ಸ್ವಾಮಿ ನೇತೃತ್ವದಲ್ಲಿ ನವಗ್ರಹಪೂಜೆ, ಗಣಪತಿ ಹೋಮ ಸೇರಿದಂತೆ ವಿವಿಧ ಪೂಜಾಕೈಂಕರ್ಯಗಳು ಜರುಗಿದವು.
೪ ಸಾವಿರಕ್ಕೂ ಹೆಚ್ಚು ಭಕ್ತರು ಪ್ರಸಾದ ಸ್ವೀಕರಿಸಿದರು.
೨೫ಏಒಆ-೧ ಮೆಳ್ಳಹಳ್ಳಿ ಶ್ರೀಶನೇಶ್ವರಸ್ವಾಮಿಯ ೭೨ ನೇ ವರ್ಷದ ವಿಶೇಷ ಪೂಜಾಕಾರ್ಯಕ್ರಮದಲ್ಲಿ ಪ್ರಸಾದ ಸ್ವೀಕರಿಸಿದ ಭಕ್ತ ಸಮೂಹ.