ಪ್ರತಿನಿಧಿ ವರದಿ ಕೊಳ್ಳೇಗಾಲ
ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬುಧವಾರ ಬೆಳಗ್ಗೆ 10ಗಂಟೆಯಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಸೆಸ್ಕ್ ಕಾರ್ಯನಿರ್ವಹಕ ಇಂಜಿನಿಯರ್ ತಿಳಿಸಿದ್ದಾರೆ.
ಸತ್ತೇಗಾಲದ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರ ಹೊಮ್ಮುವ 11 ಕೆವಿ ಫೀಡರ್ಗಳಾದ ಪಾಳ್ಯ ಐಪಿ, ಉಗನೀಯ ಎನ್.ಎಜೆ.ವೈ, ಸತ್ತೇಗಾಲ ಐಪಿ, ಯಡಕುರಿಯಾ ಎನ್.ಜೆ.ವೈ, ಧನಗೆರೆ ಐಪಿ, ಗುಂಡೇಗಾಲ ಎನ್.ಜೆ.ವೈ, ಸಿಪಿ ದೊಡ್ಡಿ ಐಪಿ, ಶಾಂತಿ ನಗರ ಐಪಿ ಮತ್ತು ಬೆಳಕವಾಡಿ ಫೀಡರ್ಗಳಿಗೆ ಕವರೆಡ್ ಕಂಡಕ್ಟರ್ ಅಳವಡಿಸುವ ಕಾಮಗಾರಿಯನ್ನು ಬುಧವಾರ ಹಮ್ಮಿಕೊಳ್ಳಲಾಗಿದೆ. ಹಾಗಾಗಿ, ತಾಲೂಕಿನ ಪಾಳ್ಯ, ಸತ್ತೇಗಾಲ, ಧನಗೆರೆ, ಗುಂಡೇಗಾಲ, ಉಗನೀಯ, ಯಡಕುರಿಯಾ, ಸರಗೂರು, ಜಿನಕನಹಳ್ಳಿ, ಚೆಲುವನಹಳ್ಳಿ, ನರೀಪುರ, ಅಗ್ರಹಾರ, ಶಿವನಸಮುದ್ರ, ಹ್ಯಾಂಡ್ಪೋಸ್ಟ್, ಜಾಗೇರಿ, ಶಾಂತಿನಗರ, ಹಳೇಕೋಟೆ, ಚನ್ನಿಪುರದೊಡ್ಡಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.