ಕೊಳ್ಳೇಗಾಲ: ಪಟ್ಟಣದ 66/11 ಕೆವಿ ವಿವಿ ಕೇಂದ್ರದಿಂದ ಹೊರ ಹೊಮ್ಮುವ 11 ಕೆವಿ ಫೀಡರ್ ಗಳಾದ ಬಸವೇಶ್ವರ ನಗರ, ಟೌನ್- 1 ಫೀಡರ್ ಗಳ ತುರ್ತು ನಿರ್ವಹಣೆಯನ್ನು ಜು.7 ರಂದು ಕೈಗೊಂಡಿರುವುದರಿಂದ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಹೊಸ ಅಣಗಳ್ಳಿ, ಆನಂದಜ್ಯೋತಿ ಕಾಲನಿ, ಬಸ್ತೀಪುರ, ಭೀಮನಗರ, ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ, ಸಿದ್ದಯ್ಯನಪುರ, ಆದರ್ಶನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಜು.7ರ ಬೆಳಗ್ಗೆ 10ರಿಂದ ಮಧ್ಯಾಹ್ನ 2 ಗಂಟೆವರೆಗೆ ವಿದ್ಯುತ್ ನಿಲುಗಡೆಯಾಗಲಿದ್ದು, ಸಾರ್ವಜನಿಕರು ಎಂದಿನಂತೆ ಸಹಕರಿಸಬೇಕು ಎಂದು ಕೊಳ್ಳೇಗಾಲ ಉಪ ವಿಭಾಗದ ಸೆಸ್ಕ್ ಎಇಇ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.