ದಸರೆಯ ಪ್ರಮುಖ ಆಕರ್ಷಣೆಗಳಲ್ಲೊಂದಾದ ಅರಮನೆಯ ಖಾಸಗಿ ದರ್ಬಾರ್ ಗೆ ಇದೀಗ ಪಟ್ಟದ ಆನೆ ಮತ್ತು ನಿಶಾನೆ ಆನೆಯ ಆಯ್ಕೆ ಫೈನಲ್ ಆಗಿದ್ದು, ರಾಜವಂಶಸ್ಥೆ ಪ್ರಮೋದ ದೇವಿ ಒಡೆಯರ್ ಅವರು ಆನೆಗಳ ಆಯ್ಕೆ ಅಂತಿಮ ಮಾಡಿದ್ದಾರೆ ಎಂದು ಡಿಸಿಎಫ್ ಡಾ ಐ ಬಿ ಪ್ರಭುಗೌಡ ಹೇಳಿದ್ದಾರೆ.
ಅರಮನೆಯ ಖಾಸಗಿ ದರ್ಬಾರ್ ಗೆ ಪಟ್ಟದ ಆನೆಯಾಗಿ ಕಂಜನ್ ಮತ್ತು ನಿಶಾನೆ ಆನೆಯಾಗಿ ಭೀಮ ಆನೆಯನ್ನು ಆಯ್ಕೆಮಾಡಲಾಗಿದೆ. ದಸರಾ ಮಹೋತ್ಸವಕ್ಕೆ ಕೆಲವೇ ದಿನಗಳು ಬಾಕಿ ಇವೆ. ಈ ಹಿನ್ನೆಲೆ ಖಾಸಗಿ ದರ್ಬಾರ್ ಗಾಗಿ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಅವರು ಆನೆಗಳ ವೀಕ್ಷಣೆ ಮಾಡಿ, ಎರಡು ಆನೆಗಳನ್ನು ಮಹಾರಾಣಿಯವರು ಆಯ್ಕೆ ಮಾಡಿದ್ದಾರೆ. ಕಂಜನ್ ಆನೆ ಪಟ್ಟದ ಆನೆಯಾಗಿ ಆಯ್ಕೆಯಾಗಿದೆ.
ಅರಮನೆಯ ಖಾಸಗಿ ದರ್ಬಾರ್ ಗೆ ನಿಶಾನೆ ಆನೆಯಾಗಿ ಭೀಮನನ್ನು ಆಯ್ಕೆ ಮಾಡಿದ್ದಾರೆ.ಈಗಾಗಲೇ ಎಲ್ಲಾ ಆನೆಗಳು ಉತ್ತಮವಾಗಿ ತಾಲೀಮು ನಡೆಸಿವೆ. ಹಲವು ದಿನಗಳ ತಾಲೀಮಿನ ಬಳಿಕ ಆನೆಗಳಿಗೆ ಈಗ ಜವಾಬ್ದಾರಿ ನೀಡುವ ಸಮಯ ಆರಂಭವಾಗಿದೆ. ಇನ್ನೆರಡು ದಿನದಲ್ಲಿ ಎಲ್ಲವೂ ಫೈನಲ್ ಆಗಲಿದೆ ಎಂದು ತಿಳಿಸಿದ್ದಾರೆ.