ಕೋಲಾರ: ತಾಲೂಕಿನ ನರಸಾಪುರ ಕೈಗಾರಿಕಾ ಪ್ರದೇಶದ ಎಕ್ಸಿಡಿ ಕಾರ್ಮಿಕರ ಪ್ರತಿಭಟನೆಗೆ ಮೇ ೧ ರಿಂದ ರೈತ ಸಂಘವು ಬೆಂಬಲ ಸೂಚಿಸಲು ನಗರದ ಕುವೆಂಪು ಉದ್ಯಾನವನದಲ್ಲಿ ಕರೆದಿದ್ದ ರೈತ ಸಂಘದ ಸಭೆಯಲ್ಲಿ ತಿರ್ಮಾನಿಸಲಾಯಿತು.
ಕೈಗಾರಿಕೆ ಅಭಿವೃದ್ದಿ ಹೆಸರಿನಲ್ಲಿ ರೈತರ ಕೃಷಿ ಜಮೀನನ್ನು ಭೂ ಸ್ವಾಧೀನ ಮಾಡಿಕೊಂಡು ರೈತರ ಮಕ್ಕಳಿಗೆ ಸ್ಥಳೀಯರಿಗೆ ಉದ್ಯೋಗ ನೀಡುತ್ತೇವೆಂದು ಭರವಸೆ ನೀಡಿದ್ದ ಸ್ಥಳೀಯ ರಾಜಕಾರಣಿಗಳು ಹಾಗೂ ಸರ್ಕಾರ ಕೈಗಾರಿಕೆ ಸ್ಥಾಪನೆಯಾದ ನಂತರ ಕೊಟ್ಟ ಮಾತನ್ನು ತಪ್ಪುವ ಜೊತೆಗೆ ಕಾರ್ಮಿಕರು ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ನಿರಂತರ ಹೋರಾಟ ಮಾಡುತ್ತಿದ್ದರು ಕನಿಷ್ಠ ಸೌಜನ್ಯಕ್ಕಾದರು ಕಾರ್ಮಿಕರ ಸಮಸ್ಯೆಯನ್ನು ಆಲಿಸದ ಸ್ಥಳೀಯ ರಾಜಕೀಯ ವ್ಯಕ್ತಿಗಳು ಹಾಗೂ ಕಾರ್ಮಿಕ ಇಲಾಖೆಯ ವಿರುದ್ದ ರೈತ ಸಂಘದ ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘದ ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ, ಪ್ರತಿಯೊಂದು ದೇಶದ ಅಭಿವೃದ್ದಿ ಆ ದೇಶದ ಕಾರ್ಮಿಕರ ಮೇಲೆ ಅವಲಂಬಿತರಾಗಿರುತ್ತದೆ. ಕಾರ್ಮಿಕ ಎಂದರೆ ಸಾಮಾನ್ಯ ಅರ್ಥದಲ್ಲಿ ದೈಹಿಕ ಇಲ್ಲವೇ ಬೌದ್ದಿಕ ಶ್ರಮವನ್ನು ಮಾರಾಟ ಮಾಡಿ ವೇತನ ಪಡೆಯುವ ವ್ಯಕ್ತಿ ಎಂದರೆ ಕಾರ್ಮಿಕನ ಪರಿಶ್ರಮ ಅಂತಹ ಕಾರ್ಮಿಕರ ಹಕ್ಕನ್ನು ಕಿತ್ತುಕೊಳ್ಳುವ ಕಾರ್ಮಿಕ ವಿರೋದಿ ನೀತಿಗೆ ಅಂತ್ಯವಿಲ್ಲವೇ ದುಡಿಯುವ ಕಾರ್ಮಿಕನು ತನ್ನ ಮೂಲಭೂತ ಹಕ್ಕನ್ನು ಕೇಳುವ ದೈರ್ಯ ಮಾಡುವಂತಿಲ್ಲವೇ ಎಂದು ಸರ್ಕಾರದ ವಿರುದ್ದ ಅಸಮಾಧಾನ ವ್ಯಕತಪಡಿಸಿದರು.
ಸುಮಾರು ೩೮ ದಿನಗಳಿಂದ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಎಕ್ಸಿಡಿ ಕಾರ್ಖಾನೆ ಕಾರ್ಮಿಕರು ನಿರಂತರ ಧರಣಿ ಹಮ್ಮಿಕೊಂಡಿದ್ದರೂ ಕಾರ್ಖಾನೆ ಮಾಲೀಕರು ಕಾರ್ಮಿಕರ ಬೇಡಿಕೆಗಳಿಗೆ ಸ್ಪಂದಿಸದೆ ಇರುವುದು ದುರಾದೃಷ್ಠಕರ ರೈತರ ಮಕ್ಕಳ ಕಾರ್ಮಿಕರ ಹೋರಾಟಕ್ಕೆ ಜಯ ಸಿಗಲು ಜಿಲ್ಲಾಧಿಕಾರಿಗಳು ಮದ್ಯಪ್ರವೇಶ ಮಾಡಿ ಕಾರ್ಮಿಕರ ಸಮಸ್ಯೆಯನ್ನು ಬಗೆಹರಿಸಬೇಕು ಇಲ್ಲವಾದರೆ ಮೇ.೧ ರ ಕಾರ್ಮಿಕ ದಿನಾಚರಣೆಯಂದು ರೈತ ಸಂಘದಿಂದ ಎಕ್ಸಿಡಿ ಕಾರ್ಮಿಕರ ಹೋರಾಟಕ್ಕೆ ಬೆಂಬಲ ಸೂಚಿಸುವ ಜೊತೆಗೆ ಮುಂದಿನ ದಿನಗಳಲ್ಲಿ ರಾಜ್ಯಾಂದ್ಯಂತ ಸಾವಿರಾರು ರೈತ ಸಂಘದ ಕಾರ್ಯಕರ್ತರೊಂದಿಗೆ ಬೃಹತ್ ಮಟ್ಟದ ಹೋರಾಟವನ್ನು ಕಾರ್ಮಿಕರ ಪರ ನ್ಯಾಯಕ್ಕಾಗಿ ಬೆಂಬಲವಾಗಿ ನಿಲ್ಲುವ ನಿರ್ದಾರವನ್ನು ಸಭೆಯಲ್ಲಿ ತಿರ್ಮಾನಿಸಲಾಯಿತು.
ಸಭೆಯಲ್ಲಿ ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ, ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ್, ಅಪ್ಪೋಜಿರಾವ್, ಶಿವಾರೆಡ್ಡಿ, ಗಿರೀಶ್, ವಿನಿತ್‌ಗೌಡ, ಶೈಲಜ, ಸುಧಾ, ನಾಗರತ್ನ, ತರ‍್ನಹಳ್ಳಿ ಅಂಜಿನಪ್ಪ, ಮಂಗಸಂದ್ರ ತಿಮ್ಮಣ್ಣ, ಮುಂತಾದವರಿದ್ದರು. 

