ಕಡ್ಡಾಯ
ಪ್ರತಿನಿಧಿ ವರದಿ ಮೈಸೂರು
ನರೆಡ್ಕೊ ಮೈಸೂರು ಚಾಪ್ಟರ್ ವತಿಯಿಂದ ರೀಟೈನಿಂಗ್ ವಾಲ್ ಲ್ಯಾಂಡ್ ಡೆವಲಪರ್ಸ್ ಅವರ ದೃಷ್ಟಿಕೋನ ವಿಷಯ ಕುರಿತ ಕಾರ್ಯಾಗಾರವನ್ನು ನಡೆಸಲಾಯಿತು.
ನಗರದ ಜಯಚಾಮರಾಜೇಂದ್ರ ಒಡೆಯರ್ ಗಾಲ್ಫ್ ಹೌಸ್ನಲ್ಲಿ ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿದ ಸಂಪನ್ಮೂಲ ವ್ಯಕ್ತಿಗಳು ರೀಟೈನಿಂಗ್ ವಾಲ್ ಲ್ಯಾಂಡ್ ಡೆವಲಪರ್ಸ್ ವಿಷಯದ ಕುರಿತು ಮಾಹಿತಿ ನೀಡಿದರು. ಪ್ರಮುಖವಾಗಿ ಮಾತನಾಡಿದ ಹೈದರಾಬಾದ್ನ ಐಐಟಿ ಪ್ರಾಧ್ಯಾಪಕ ಪ್ರೊ. ಮದೀರ ಆರ್. ಮಾದವ್ ಅವರು ಜಿಯೋ ಟೆಕ್ನಿಕಲ್ ಪರ್ಸ್ಫೆಕ್ಟಿವ್ ಆಫ್ ಫೌಂಡೇಶನ್ಸ್, ರಿಟೈನಿಂಗ್ ಸ್ಟ್ರರ್ಕ್ಟ ಮತ್ತು ಸಾಯಿಲ್ ನೇಲಿಂಗ್ ಕುರಿತು ಮಾಹಿತಿ ನೀಡಿದರು.
ಬೆಂಗಳೂರಿನ ಕನ್ಸೆಲಿಂಗ್ ಇಂಜಿನಿಯರ್ಸ್ನ ಎ.ಸಿ. ಶಿವಕುಮಾರ್ ಅವರು ಮಾತನಾಡಿ, ಡೀಪ್ ಫೌಂಡೇಶನ್ ಫಾರ್ ಕಾಂಕಿಕ್ಟ್ ಸ್ಟ್ರಕ್ಟರ್ ಬಗ್ಗೆ ವಿವರಣೆ ನೀಡಿದರು. ಬೆಂಗಳೂರಿನ ಉಮೇಶ್ ಬಿ. ರಾವ್ ಕಂಪನಿಯ ಉಮೇಶ್ ಅವರು, ಕನ್ಸ್ಟ್ರಕ್ಟಬಿಲಿಟಿ ಆಫ್ ಆರ್.ಸಿ ರೈಟೇನಿಂಗ್ ವಾಲ್ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರೆ. ಮೈಸೂರಿನ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಎಸ್.ಕೆ. ಪ್ರಸಾದ್ ಅವರು ರೀಇನ್ಫೋರ್ಡ್ ಅರ್ಥ್ ಮತ್ತು ಗ್ಯಾಬಿಯನ್ ಸ್ಟ್ರಕ್ಟರ್ಸ್ ಮಾಹಿತಿ ಒದಗಿಸಿದರು.
ಈ ಸಂದರ್ಭದಲ್ಲಿ ನರೆಡ್ಕೊ ಮೈಸೂರು ಚಾಪ್ಟರ್ ಅಧ್ಯಕ್ಷ ವಿ.ಸಿ. ರವಿಕುಮಾರ್, ನರೆಡ್ಕೊ ಕರ್ನಾಟಕ ವಿಭಾಗದ ಮುಖ್ಯಸ್ಥ ಮನೋಜ್ ಲೋಧ, ಮೈಸೂರು ಚಾಪ್ಟರ್ ಪದಾಧಿಕಾರಿಗಳಾದ ಟಿ.ಜಿ. ಆದಿಶೇಷನ್ ಗೌಡ, ಜಿ.ಕೆ. ಸುಧೀಂದ್ರ, ಡಾ.ಎಂ.ಡಿ. ರಾಘವೇಂದ್ರ ಪ್ರಸಾದ್, ಎ.ಪಿ. ನಾಗೇಶ್, ಗಗನ್ ದೀಪ್, ಪಿ.ಎಸ್ ಗವರ್ನಿಂಗ್ ಕೌನ್ಸಿಲ್ ಸದಸ್ಯರಾದ ದಿವೇಶ್ ಸೇರಿದಂತೆ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳು, ಆರ್ಕಿಟೆಕ್ಟ್ ವಿದ್ಯಾರ್ಥಿಗಳು ಇತರರಿದ್ದರು.