ಪ್ರತಿನಿಧಿ ವರದಿ ಚಾಮರಾಜನಗರ
ನಗರದ ಸಂತ ಫ್ರಾನ್ಸಿಸ್ ಐಸಿಎಸ್ಇ ಶಾಲೆಯ ವಿದ್ಯಾರ್ಥಿಗಳು ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ಕ್ರೀಡಾಸ್ಪರ್ಧೆಯಲ್ಲಿ ಭಾಗವಹಿಸಿ 10 ಪದಕಗಳನ್ನು ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಬೆಂಗಳೂರಿನ ವಿದ್ಯಾನಗರದಲ್ಲಿ 14ರಿಂದ 17 ವರ್ಷದೊಳಗಿನ ಮಕ್ಕಳಿಗೆ ನಡೆದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಸಂತ ಫ್ರಾನ್ಸಿಸ್ ಶಾಲೆಯ ಮಕ್ಕಳು 10 ಪದಕಗಳನ್ನು ಮುಡಿಗೇರಿಸಿಕೊಂಡು ಮೊದಲ ಬಾರಿಗೆ ದಾಖಲೆ ನಿರ್ಮಿಸಿದ್ದಾರೆ.
14 ವರ್ಷದೊಳಗಿನ ಮಕ್ಕಳ ವಿಭಾಗದಲ್ಲಿ ಸುದರ್ಶನ್ ಗುಂಡು ಎಸೆತದಲ್ಲಿ 2ನೇ ಸ್ಥಾನ, ಡಿಸ್ಕಸ್ ಥ್ರೋ ದಲ್ಲಿ ಮೊದಲನೇ ಸ್ಥಾನ ಪಡೆದಿದ್ದಾನೆ. ಸಂಪದ ಡಿಸ್ಕಸ್ ಥ್ರೋನಲ್ಲಿ 2ನೇ ಸ್ಥಾನ ಪಡೆದರೆ, ಇನಾಮ್ ಗುಂಡು ಎಸೆತದಲ್ಲಿ ಮೊದಲನೇ ಸ್ಥಾನ ಪಡೆದಿದ್ದಾರೆ.
17 ವರ್ಷದೊಳಗಿನ ಮಕ್ಕಳಿಗಾಗಿ ನಡೆದ ಸ್ಪರ್ಧೆಯಲ್ಲಿ ಎಚ್.ಡಿ.ಭೂಮಿಕ ಗುಂಡು ಎಸೆತದಲ್ಲಿ ಮೊದಲನೇ ಸ್ಥಾನ ಹಾಗೂ ಚಕ್ರ ಎಸೆತದಲ್ಲಿ 2ನೇ ಸ್ಥಾನ ಪಡೆದಿದ್ದಾರೆ. ಕ್ರಿಸ್ಟಿ ಭರ್ಜಿ ಎಸೆತದಲ್ಲಿ 2ನೇ ಸ್ಥಾನ ಹಾಗೂ ತ್ರಿವಿಧ ಜಿಗಿತದಲ್ಲಿ 3ನೇ ಸ್ಥಾನ, ಆದರ್ಶ ತ್ರಿವಿಧ ಜಿಗಿತದಲ್ಲಿ 3ನೇ ಸ್ಥಾನ, ಆಶೀಸ್ ಪಿ. ರಾಜ್ ಚಕ್ರ ಎಸೆತದಲ್ಲಿ 2ನೇ ಸ್ಥಾನ ಪಡೆದಿದ್ದಾರೆ.
ಸೆ.25 ರಿಂದ 28 ರವರೆಗೆ ಹೈದರಾಬಾದ್ನಲ್ಲಿ ನಡೆಯುವ ರಾಷ್ಟ್ರ ಮಟ್ಟದ ಕ್ರೀಡೆಗೆ ಆಯ್ಕೆಯಾಗಿದರೆ. ಈ ರಾಜ್ಯ ಮಟ್ಟದ ಕ್ರೀಡಾ ಕೂಟದಲ್ಲಿ ಭಾಗವಹಿಸಿ ಪದಕಗಳನ್ನು ತಂದುಕೊಡಲು ಮಕ್ಕಳಿಗೆ ಸತತ ತರಬೇತಿ ನೀಡಿದ ತರಬೇತುದಾರ ಶಿವು ಹಾಗೂ ಮಕ್ಕಳಿಗೆ ಸಂತ ಫ್ರಾನ್ಸಿಸ್ ಶಾಲೆಯ ಪ್ರಾಂಶುಪಾಲ ಬ್ರದರ್ ಪ್ರಭಾಕರ್ ಅಭಿನಂಧಿಸಿದ್ದಾರೆ.
22ಸಿಎಚ್ಎನ್.2: