78 ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತವಾಗಿ ಮಾಜಿ ಸಚಿವ ಸಾ ರಾ ಮಹೇಶ್ ಪತ್ನಿ ಅನಿತಾ ಸಾರಾ ಮಹೇಶ್ ಅವರು ವಿಶೇಷ ಹಾಡೊಂದನ್ನು ರಚಿಸಿ ತಾವೇ ಹಾಡುವ ಮೂಲಕ ದೇಶಭಕ್ತಿಯನ್ನು ಮೆರೆದಿದ್ದಾರೆ.
ಅನಿತಾ ಸಾ ರಾ ಮಹೇಶ್ರವರು ದೇಶಭಕ್ತಿ ಗೀತೆಯೊಂದನ್ನು ತಾವೇ ರಚಿಸಿ, ಮತ್ತು ತಾವೇ ಕಂಠದಾನ ಮಾಡಿರುವ ಹಾಡಿನ ವೀಡಿಯೋ ಬಿಡುಗಡೆ ಮಾಡಿದ್ದಾರೆ. ಹಾಡಿನ ಚಿತ್ರೀಕರಣಕ್ಕಾಗಿ ನೂರಾರು ಕಲಾವಿದರನ್ನು ಬಳಸಿಕೊಂಡು ವೀಡಿಯೋ ಚಿತ್ರೀಕರಣ ಮಾಡಲಾಗಿದೆ. ದೇಶದ ಸ್ವತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದ ಸಾವಿರಾರು ಹೋರಾಟಗಾರರಿಗೆ ಹಾಡನ್ನು ಅರ್ಪಣೆ ಮಾಡಿದ್ದಾರೆ.
ಮಾತೃ ಭೂಮಿ ನಮ್ಮ ಭಾರತ ಪುಣ್ಯ ಭೂಮಿ ನಮ್ಮ ಭಾರತ ಎಂಬ ಹಾಡನ್ನು ಸಖತ್ ಕಲರ್ ಪುಲ್ ಆಗಿ ಚಿತ್ರೀಕರಿಸುವ ಇವರು ಸ್ವಾತಂತ್ರ್ಯ ದಿನದ ಅಂಗವಾಗಿ ಹಾಡನ್ನು ರಿಲೀಸ್ ಮಾಡಿದ್ದಾರೆ. ತಾವೇ ಗೀತೆಯನ್ನು ರಚಿಸಿ, ಹಾಡಿರುವ ಅನಿತಾ ಸಾ ರಾ ಮಹೇಶ್ ಅವರು ಹಾಡಿನ ಚಿತ್ರೀಕರಣದಲ್ಲಿಯೂ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.