ಮೈಸೂರು: ಮೈಸೂರು ವಿಜ್ಞಾನ ನಾಟಕೋತ್ಸವ ಟ್ರಸ್ಟ್ ವತಿಯಿಂದ ಜೂ. 20 ರಿಂದ 23 ರವರೆಗೆ ವಿಜ್ಞಾನ ನಾಟಕೋತ್ಸವ ಆಯೋಜಿಸಲಾಗಿದೆ.
ರಾಮಕೃಷ್ಣನಗರದ ರಮಾಗೋವಿಂದ ರಂಗಮಂದಿರದಲ್ಲಿ ಪ್ರತಿದಿನ ಸಂಜೆ 6.30ಕ್ಕೆ ನಾಟಕ ಪ್ರದರ್ಶನ ಆರಂಭಗೊಳ್ಳಲಿದೆ. ಮೊದಲ ದಿನ ಜೂ. 20ರಂದು ವಿಜ್ಞಾನ- ವಿಕಾಸ-ವಾದ, 21 ರಂದು ಎಸಿ ವರ್ಸಸ್ ಡಿಸಿ, 22 ರಂದು ಗೆಲಿಲಿಯೋಸ್ ಡಾಟರ್ (ಇಂಗ್ಲಿಷ್), 23ರಂದು ಹಸಿರೇ ಹೊನ್ನು ನಾಟಕಗಳು ಪ್ರದರ್ಶನಗೊಳ್ಳಲಿವೆ.
ಜೂ. 20 ರಿಂದ 23ರವರೆಗೆ ಪ್ರತಿದಿನ ಸಂಜೆ 5.30 ರಿಂದ 6.15ರವರೆಗೆ ರಂಗಮಂದಿರದ ಮುಂದಿನ ಆವರಣದಲ್ಲಿ ನಾಟಕೋತ್ಸವದ ಪೂರಕ ಚಟುವಟಿಕೆಗಳು ನಡೆಯಲಿವೆ. ಅದರಂತೆ, ಜೂ. 20ರಂದು ಉದ್ಘಾಟನಾ ಸಮಾರಂಭ ಜರುಗಲಿದ್ದು, ಬೆಂಗಳೂರಿನ ದಿ ಅಕಾಡೆಮಿ ಟ್ರಸ್ಟ್ ಕಾರ್ಯದರ್ಶಿ ಶುಭಂಕರ್ ಬಿಸ್ವಾಸ್ ಉದ್ಘಾಟನೆ ನೆರವೇರಿಸಲಿದ್ದಾರೆ. 21ರಂದು ಕನ್ನಡ ವಿಜ್ಞಾನ ನಾಟಕಗಳ ಆಯ್ದ ಭಾಗಗಳ ಓದು, 22ರಂದು ವಿಜ್ಞಾನ ಗೀತೆಗಳು, 23ರಂದು ಇಂಗ್ಲಿಷ್ ವಿಜ್ಞಾನ ನಾಟಕಗಳ ಆಯ್ದ ಭಾಗಗಳ ಓದು ನಡೆಯಲಿದೆ. ಅಲ್ಲದೆ, ಪ್ರತಿದಿನ ಸಂಜೆ 4.30ಕ್ಕೆ ಕಲೆ ಮತ್ತು ಗಣಿತ – ಪ್ರದರ್ಶನ ಇರಲಿದೆ.
- ಫೋಟೋ ಕೊಡಲಾಗುವುದು …