ನಾಪೋಕ್ಲು: ಬೇತು ಗ್ರಾಮದ ಶ್ರೀ ಮಕ್ಕಿಶಾಸ್ತಾವು ದೇವರ ವಾರ್ಷಿಕ ಎಡಮ್ಯಾರು ಉತ್ಸವವು ಎರಡು ದಿನಗಳ ಕಾಲ ವಿವಿಧ ದೇವರ ಕೋಲಗಳೊಂದಿಗೆ ಶ್ರದ್ಧಾ ಭಕ್ತಿಯಿಂದ ಜರುಗಿತು.
ಶನಿವಾರ ಬೆಳಗ್ಗಿ ನಿಂದಲೇ ವಿವಿಧ ಕೋಲಗಳು ನಡೆದು ಶಾಸ್ತಾವು ದೇವರಿಗೆ ಭಕ್ತರು ಸೇವೆ ಸಲ್ಲಿಸಿದರು. ಅಜ್ಜಪ್ಪ ದೇವರ ಕೋಲ ಹಾಗೂ ಮಧ್ಯಾಹ್ನ ವಿಷ್ಣುಮೂರ್ತಿ ದೇವರ ಕೋಲಗಳು ತಮ್ಮ ಸಾಂಪ್ರದಾಯಿಕ ವೇಷಭೂಷಣಗಳೊಂದಿಗೆ ನಡೆಯಿತು.
ಉತ್ಸವದಲ್ಲಿ ಭಕ್ತಾದಿಗಳು ದೇವರಿಗೆ ವಿವಿಧ ರೀತಿಯ ಹರಕೆಗಳನ್ನು ಸಲ್ಲಿಸಿದರು. ಅನ್ನದಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಶುಕ್ರವಾರ ಎತ್ತ್ ಪೋರಾಟ, ರಾತ್ರಿ ದೀಪಾರಾಧನೆ ನಡೆಯಿತು. ಈ ಸಂದರ್ಭ ದೇವಾಲಯದ ತಕ್ಕಮುಖ್ಯಸ್ಥರು,ಆಡಳಿತ ಮಂಡಳಿ ಪದಾಧಿಕಾರಿಗಳು, ಅಧಿಕ ಸಂಖ್ಯೆಯಲ್ಲಿ ಊರಿನ ಪರಊರಿನ ಭಕ್ತಾದಿಗಳು ಪಾಲ್ಗೊಂಡು ದೇವರ ಪ್ರಸಾದ ಸ್ವೀಕರಿಸಿ ಪುನೀತರಾದರು.
ಫೋಟೋ 4 ಎಂಡಿಕೆ 02 ; ಶ್ರೀ ಮಕ್ಕಿ ಶಾಸ್ತಾವು ನಮ್ಮೆ