ಬಳ್ಳಾರಿ: ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಬಿ. ಶ್ರೀರಾಮುಲು ಅವರು ಏ.12 ಬಳ್ಳಾರಿ ನಗರದ ಎಸ್ಪಿ ಸರ್ಕಲ್ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ರೋಡ್ಶೋ ನಡೆಸಿ ನಾಮಪತ್ರ ಸಲ್ಲಿಸಿದರು. ಈ ವೇಳೆ ಶ್ರೀರಾಮುಲುಗೆ ಆನಂದ ಸಿಂಗ್, ಜನಾರ್ದನರೆಡ್ಡಿ ಪತ್ನಿ ಅರುಣಾಲಕ್ಷ್ಮೀ ಸಾಥ್ ನೀಡಿದರು. ಇದೇ ವೇಳೆ ಅವರ ಆಸ್ತಿ ವಿವರ ಸಲ್ಲಿಸಿದ್ದು, ಒಟ್ಟು 45 ಕೋಟಿ 88 ಲಕ್ಷದ 2 ಸಾವಿರದ 320 ರೂ. ಆಸ್ತಿ ಹೊಂದಿದ್ದಾರೆ.
ಶ್ರೀರಾಮುಲು ಆಸ್ತಿ ವಿವರ:
ಒಟ್ಟು ಆಸ್ತಿಯ ಮೌಲ್ಯ; 45.88 ಕೋಟಿ ರೂ.
ನಗದು: 5.50 ಲಕ್ಷ ರೂ.
ಒಟ್ಟು ಚರಾಸ್ತಿ: 6.22 ಕೋಟಿ ರೂ.
ಸ್ಥಿರಾಸ್ತಿ: 39.65 ಕೋಟಿ ರೂ.
ವಾಹನ: ಬಿಎಂಡಬ್ಲ್ಯು, ಇನೋವಾ ಕಾರು, ಅಶೋಕ್ ಲೇಲ್ಯಾಂಡ್ ಬಸ್
ಚಿನ್ನ: 4.27 ಕೆ.ಜಿ.
ಬೆಳ್ಳಿ: 9.50 ಕೆ.ಜಿ.
ಸಾಲ: 6.69 ಕೋಟಿ ರೂ.
ಅಪರಾಧ ಪ್ರಕರಣ: 4
ಶ್ರೀರಾಮುಲು ಪತ್ನಿ ಆಸ್ತಿ ವಿವರ:
ಒಟ್ಟು ಆಸ್ತಿಯ ಮೌಲ್ಯ: 22.57 ಕೋಟಿ ರೂ.
ನಗದು: 2.50 ಲಕ್ಷ ರೂ.
ಒಟ್ಟು ಚರಾಸ್ತಿ: 2.28 ಕೋಟಿ ರೂ.
ಸ್ಥಿರಾಸ್ತಿ: 20.29 ಕೋಟಿ ರೂ.
ವಾಹನ: ಇಲ್ಲ
ಚಿನ್ನ: 2.33 ಕೆ.ಜಿ
ಬೆಳ್ಳಿ: ಇಲ್ಲ
ಸಾಲ: ಇಲ್ಲ