ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಸ್ಥಳ ಪರಿಶೀಲನೆ ವೇಳೆ ಬ್ಯಾಟರಿ, ಟೈಮರ್ ಹಾಗೂ ಟೈಮರ್ ಫಿಕ್ಸ್ ಮಾಡಿ ಸ್ಪೋಟಿಸಲು ಬಳಿಸಿದ್ದ ರಾಸಾಯನಿಕಗಳು ಪತ್ತೆಯಾಗಿದ್ದವು. ಇದರ ಬೆನ್ನಲ್ಲೇ, ಶಂಕಿತ ಆರೋಪಿ ಕೆಫೆಯಲ್ಲಿ ಬಾಂಬ್ ಸ್ಫೋಟಿಸುವ ಮುನ್ನ ಬಸ್ ನಿಲ್ದಾಣದಲ್ಲಿ ಬಾಂಬ್ಗೆ ಟೈಮ್ ಫಿಕ್ಸ್ ಮಾಡುತ್ತಿದ್ದ ವಿಡಿಯೋ ಲಭ್ಯವಾಗಿದೆ.
ಶಂಕಿತ ಬಾಂಬರ್ ಮಾರ್ಚ್ 1 ರಂದು ಬಸ್ ನಿಲ್ದಾಣಕ್ಕೆ ಬಂದು ಬೆಳಗ್ಗೆ 10.43ಕ್ಕೆ ಬಾಂಬ್ಗೆ ಟೈಮರ್ ಸೆಟ್ ಮಾಡಿದ್ದಾನೆ. ನಿಲ್ದಾಣದಲ್ಲಿ ಯಾವುದೇ ಭಯ ಇಲ್ಲದೆ ಜನರ ಮುಂದೆಯೇ ಟೈಮ್ ಸೆಟ್ ಮಾಡಿದ್ದಾನೆ. ಈ ದೃಶ್ಯ ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಲ್ಲದೆ, ಇತರೆಡೆ ಸಂಚರಿಸುತ್ತಿರುವ ವಿಡಿಯೋ ಕೂಡ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.