2024 ರ ಟಿ-20 ವಿಶ್ವಕಪ್ ಜೂನ್ 1 ರಿಂದ 29 ರವರೆಗೆ ನಡೆಯಲಿದೆ. ವೆಸ್ಟ್ ಇಂಡೀಸ್ ಮತ್ತು ಅಮೆರಿಕದ 9 ನಗರಗಳಲ್ಲಿ 55 ಪಂದ್ಯಗಳು ನಡೆಯಲಿವೆ. ಭಾರತ ಮತ್ತು ಪಾಕಿಸ್ತಾನ ಒಂದೇ ಗುಂಪಿನಲ್ಲಿದ್ದು, ಭಾರತ-ಪಾಕ್ ನಡುವಿನ ಗುಂಪು ಹಂತದ ಪಂದ್ಯ ಜೂನ್ 9 ರಂದು ನ್ಯೂಯಾರ್ಕ್ನಲ್ಲಿ ನಡೆಯಲಿದೆ. ಫೈನಲ್ ಪಂದ್ಯ ಜೂನ್ 29 ರಂದು ವೆಸ್ಟ್ ಇಂಡೀಸ್ನ ಬಾರ್ಬಡೋಸ್ ನಗರದಲ್ಲಿ ನಡೆಯಲಿದೆ. ಮೊದಲ ಬಾರಿಗೆ, ಟಿ-20 ವಿಶ್ವಕಪ್ನಲ್ಲಿ 20 ತಂಡಗಳನ್ನು ಸೇರಿಸಲಾಗಿದೆ, ಹಿಂದಿನ ಎರಡು ಆವೃತ್ತಿಗಳಲ್ಲಿ ತಲಾ 16 ತಂಡಗಳು ಇದ್ದವು. ಇಂಗ್ಲೆಂಡ್ ಹಾಲಿ ಚಾಂಪಿಯನ್ ಆಗಿದ್ದರೆ, ಭಾರತ ಈಗಾಗಲೇ 2007 ರಲ್ಲಿ ಟೂರ್ನಮೆಂಟ್ ಪ್ರಶಸ್ತಿಯನ್ನು ಗೆದ್ದಿತ್ತು.
ಕೆನಡಾ ಮತ್ತು ಅಮೆರಿಕ ನಡುವಿನ ಆರಂಭಿಕ ಪಂದ್ಯ: ಟೂರ್ನಿಯ ಉದ್ಘಾಟನಾ ಪಂದ್ಯ ಕೆನಡಾ ಮತ್ತು ಆತಿಥೇಯ ತಂಡ ಅಮೆರಿಕ ನಡುವೆ ನಡೆಯಲಿದೆ. ಜೂನ್ 1 ರಂದು ಡಲ್ಲಾಸ್ನಲ್ಲಿ ಪಂದ್ಯ ನಡೆಯಲಿದೆ. 1844ರಲ್ಲಿ ಕ್ರಿಕೆಟ್ ಇತಿಹಾಸದ ಮೊಟ್ಟ ಮೊದಲ ಪಂದ್ಯ ಕೂಡ ಅಮೆರಿಕ ಹಾಗೂ ಕೆನಡಾ ನಡುವೆ ನಡೆದಿತ್ತು. ವೆಸ್ಟ್ ಇಂಡೀಸ್ ತನ್ನ ಮೊದಲ ಪಂದ್ಯವನ್ನು ಪಪುವಾ ನ್ಯೂಗಿನಿಯಾ ವಿರುದ್ಧ ಜೂನ್ 2 ರಂದು ಗಯಾನಾದಲ್ಲಿ ಆಡಲಿದೆ. 29 ದಿನಗಳ ಕಾಲ 20 ತಂಡಗಳ ನಡುವಿನ ಟೂರ್ನಿಯಲ್ಲಿ ಒಟ್ಟು 55 ಪಂದ್ಯಗಳು ನಡೆಯಲಿದೆ. ಜೂನ್ 1 ರಿಂದ 17 ರವರೆಗೆ 40 ಗುಂಪು ಹಂತದ ಪಂದ್ಯಗಳು ನಡೆಯಲಿವೆ. ಸೂಪರ್-8 ಹಂತದ 12 ಪಂದ್ಯಗಳು ಜೂನ್ 19 ರಿಂದ 24 ರವರೆಗೆ ನಡೆಯಲಿವೆ. ಮೊದಲ ಸೆಮಿಫೈನಲ್ ಗಯಾನಾದಲ್ಲಿ ಜೂನ್ 26 ರಂದು ಮತ್ತು ಎರಡನೇ ಸೆಮಿಫೈನಲ್ ಜೂನ್ 27 ರಂದು ಟ್ರಿನಿಡಾಡ್ನಲ್ಲಿ ನಡೆಯಲಿದೆ. ಅಂತಿಮ ಪಂದ್ಯ ಜೂನ್ 29 ರಂದು ಬಾರ್ಬಡೋಸ್ನಲ್ಲಿ ನಡೆಯಲಿದೆ.
4 ಗ್ರೂಪ್ಗಳ ನಡುವಣ ಪಂದ್ಯಗಳ ಬಳಿಕ ಪಾಯಿಂಟ್ಸ್ ಟೇಬಲ್ ಲೆಕ್ಕಾಚಾರ ಬರಲಿದೆ. ಅಂದರೆ ಆಯಾ ಗ್ರೂಪ್ಗಳ ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಪಡೆಯುವ ತಂಡಗಳು ಮುಂದಿನ ಹಂತಕ್ಕೇರಲಿದೆ. ಇದರಿಂದಾಗಿ ನಾಲ್ಕು ಗುಂಪುಗಳಿಂದ ಒಟ್ಟು 8 ತಂಡಗಳು ಸೂಪರ್-8 ಹಂತಕ್ಕೇರಲಿದೆ.
ಸೂಪರ್-8 ಹಂತದಲ್ಲಿ ಒಟ್ಟು 8 ತಂಡಗಳ ನಡುವೆ ಕಾದಾಟ ನಡೆಯಲಿದೆ. ಈ ಹಂತದಲ್ಲಿ ಎಂಟು ತಂಡಗಳು ಪರಸ್ಪರ ಒಂದೊಂದು ಪಂದ್ಯಗಳನ್ನಾಡಲಿದೆ. ಈ ವೇಳೆ ಅಂಕಪಟ್ಟಿಯಲ್ಲಿ ಅಗ್ರ ನಾಲ್ಕರಲ್ಲಿ ಕಾಣಿಸಿಕೊಳ್ಳುವ 4 ತಂಡಗಳು ನಾಕೌಟ್ ಹಂತಕ್ಕೇರಲಿದೆ.
ಸೂಪರ್-8 ಹಂತದಿಂದ ಒಟ್ಟು 4 ತಂಡಗಳು ಸೆಮಿಫೈನಲ್ಗೇರಲಿದೆ. ಇಲ್ಲಿ ಸೂಪರ್-8 ಹಂತದ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದ ತಂಡ 4ನೇ ಸ್ಥಾನದಲ್ಲಿದ್ದ ತಂಡದ ವಿರುದ್ಧ ಮೊದಲ ಸೆಮಿಫೈನಲ್ ಪಂದ್ಯವಾಡಲಿದೆ. ಇನ್ನು 2ನೇ ಸೆಮಿಫೈನಲ್ನಲ್ಲಿ 2ನೇ ಮತ್ತು 3ನೇ ಸ್ಥಾನಗಳಲ್ಲಿದ್ದ ತಂಡಗಳು ಮುಖಾಮುಖಿಯಾಗಲಿದೆ.
ಸೆಮಿಫೈನಲ್ನಲ್ಲಿ ಗೆಲ್ಲುವ 2 ತಂಡಗಳು ಜೂನ್ 29 ರಂದು ನಡೆಯುವ ಫೈನಲ್ ಪಂದ್ಯದಲ್ಲಿ ಕಣಕ್ಕಿಳಿಯಲಿದೆ.
ಟಿ20 ವಿಶ್ವಕಪ್ ಗ್ರೂಪ್:
ಗ್ರೂಪ್-A
- ಭಾರತ
- ಪಾಕಿಸ್ತಾನ್
- ಐರ್ಲೆಂಡ್
- ಕೆನಡಾ
- ಯುಎಸ್ಎ
ಗ್ರೂಪ್-B
- ಇಂಗ್ಲೆಂಡ್
- ಆಸ್ಟ್ರೇಲಿಯಾ
- ನಮೀಬಿಯಾ
- ಸ್ಕಾಟ್ಲೆಂಡ್
- ಒಮಾನ್
ಗ್ರೂಪ್-C
- ನ್ಯೂಝಿಲೆಂಡ್
- ಅಫ್ಘಾನಿಸ್ತಾನ್
- ವೆಸ್ಟ್ ಇಂಡೀಸ್
- ಉಗಾಂಡ
- ಪಪುವಾ ನ್ಯೂಗಿನಿಯಾ
ಗ್ರೂಪ್-D
- ಸೌತ್ ಆಫ್ರಿಕಾ
- ಬಾಂಗ್ಲಾದೇಶ್
- ನೆದರ್ಲೆಂಡ್ಸ್
- ಶ್ರೀಲಂಕಾ
- ನೇಪಾಳ