ಸುದೀಪ್ ಪುತ್ರಿ ಸಾನ್ವಿ ಸುದೀಪ್ ಕತ್ತಿನ ಭಾಗದಲ್ಲಿ ‘ಪೀಕು’ ಎಂದು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಪೀಕು ಎಂದರೆ ಹಿಂದಿ ಸಿನಿಮಾದ ಹೆಸರಲ್ಲ. ಪೀಕು, ಸಾನ್ವಿಯ ತಾಯಿ ಪ್ರಿಯಾ ಸುದೀಪ್ರ ಅಡ್ಡ ಹೆಸರು. ಪ್ರಿಯಾ ಸುದೀಪ್ರನ್ನು ಅವರ ತಾತ ಮುದ್ದಾಗಿ ಪೀಕು ಎಂದೇ ಕರೆಯುತ್ತಿದ್ದರಂತೆ. ಹಾಗಾಗಿ ತಾಯಿಯ ಅಡ್ಡ ಹೆಸರನ್ನು ಟ್ಯಾಟೂ ಮಾದರಿಯಲ್ಲಿ ಸಾನ್ವಿ ಹಾಕಿಸಿಕೊಂಡಿದ್ದಾರೆ. ಟ್ಯಾಟೂ ಹಾಕಿಸಿಕೊಂಡಿರುವ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
‘ನೀವೆಲ್ಲ ಏನಾದರೂ ಅಂದುಕೊಳ್ಳುವ ಮೊದಲು ನಾನೇ ಹೇಳುಬಿಡುತ್ತೇನೆ. ‘ಪೀಕು’ ಎಂಬುದು ಅಡ್ಡ ಹೆಸರು. ನನ್ನ ತಾಯಿಯನ್ನು ಅವರ ತಾತ ಪೀಕು ಎಂದೇ ಕರೆಯುತ್ತಿದ್ದರು’ ಎಂದು ಸ್ಟೋರಿ ಹಾಕಿಕೊಂಡಿದ್ದಾರೆ ಸಾನ್ವಿ ಸುದೀಪ್.