ಬೆಂಗಳೂರು, ಅ.10: ಬೆಂಗಳೂರಿನ ಅಶೋಕ್ನಗರದ ಜೈನ್ ಮಂದಿರದಲ್ಲಿ ನಡೆದಿದ್ದ ಕಳ್ಳತನ (Theft) ಪ್ರಕರಣದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಜೈನ್ ಮಂದಿರದಲ್ಲಿ ಟೈಲ್ಸ್ ಕೆಲಸ ಮಾಡಲು ಬಂದಿದ್ದ ವ್ಯಕ್ತಿಯೇ ಕಳ್ಳತನಕ್ಕೆ ಹೊಂಚು ಹಾಕಿದ್ದು ಟೈಲ್ಸ್ ಕೆಲಸ ಮುಗಿದ ಎರಡು ತಿಂಗಳು ನಂತರ ಸ್ನೇಹಿತರೊಂದಿಗೆ ಕಳ್ಳತನ ಮಾಡಿದ್ದಾರೆ. 14 ಕೆಜಿ ದೇವರ ಬೆಳ್ಳಿಯ ಆಭರಣ, ದೇವಾಲಯದ ವಸ್ತುಗಳ ಕಳ್ಳತನವಾಗಿತ್ತು. ಸದ್ಯ 6 ಜನ ಆರೋಪಿಗಳನ್ನು ಅಶೋಕ್ನಗರದ ಪೊಲೀಸರು ಬಂಧಿಸಿದ್ದಾರೆ.