ಮನೆ ಮಹಡಿ ಮೇಲೆ
*ನಂಜನಗೂಡು ತಾಲೂಕಿನ ರಾಂಪುರ ಗ್ರಾಮದಲ್ಲಿ ಘಟನೆ
ಪ್ರತಿನಿಧಿ ವರಧಿ ನಂಜನಗೂಡು
ಸಂಬಂಧಿಕರ ಮನೆಯಿಂದ ತನ್ನ ಮನೆಗೆ ಬಂದ ವ್ಯಕ್ತಿ, ತಾರಸಿ ಮೇಲೆ ಶವವಾಗಿ ಪತ್ತೆಯಾದ ಘಟನೆ ನಂಜನಗೂಡು ತಾಲೂಕಿನ ರಾಂಪುರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಾಗೇಂದ್ರ(36) ತನ್ನ ಮನೆ ಮಹಡಿ ಮೇಲೆ ಶವವಾಗಿ ಪತ್ತೆಯಾದವರು. ಪತಿಯ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿರುವ ಪತ್ನಿ ಮಂಗಳಾ, ಹುಲ್ಲಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಎರಡು ದಿನಗಳ ಹಿಂದೆ ಸಂಬಂಧಿಕರ ಮನೆಗೆ ತೆರಳಿ ನಂತರ ತನ್ನ ಮನೆಗೆ ಬಂದಿದ್ದಾರೆ. ಪತಿ ಮನೆಗೆ ಬಂದ ವಿಚಾರ ಪತ್ನಿಯ ಗಮನಕ್ಕೆ ಬಂದಿಲ್ಲ. ಮಹಡಿ ಮೇಲೆ ಬಟ್ಟೆ ಒಣಗಿ ಹಾಕಲು ತೆರಳಿದ ಪತ್ನಿಗೆ ಪತಿಯ ಮೃತದೇಹ ಕಂಡುಬಂದಿದೆ. ಪತಿಯ ಸಾವು ಅನುಮಾನಾಸ್ಪದವಾಗಿದೆ ಎಂದು ಪತ್ನಿ ಮಂಗಳಾ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪಿಎಸ್ಐ ಚೇತನ್ ಕುಮಾರ್ ಮತ್ತು ಸಿಬ್ಬಂದಿ ತನಿಖೆಗೆ ಮುಂದಾಗಿದ್ದಾರೆ.