ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮೋದಿ 3.0ಸರ್ಕಾರದ ಮೊದಲ ಬಜೆಟ್ ಇಂದು ಮಂಡಿಸಿದ್ದಾರೆ. ಮೋದಿ ಸರ್ಕಾರದ ಮೂರನೇ ಅಲೆಯ ಮೊದಲನೇ ಬಜೆಟ್ ಗೆ ಸಾಕಷ್ಟು ನಿರೀಕ್ಷೆಗಳು ಇದ್ದವು. ಅದರಂತೆ ನಿರ್ಮಲಾ ಸೀತಾರಾಮನ್ ಉದ್ಯೋಗಿಗಳಿಗೆ ಸಿಹಿ ಸುದ್ದಿಯನ್ನ ಕೊಟ್ಟಿದ್ದಾರೆ. ಉದ್ಯೋಗ ಹೆಚ್ಚಿಸಲು ಈ ಬಾರಿಯ ಬಜೆಟ್ ನಲ್ಲಿ ಒತ್ತು ನೀಡಲಾಗಿದೆ. ಮೊದಲ ಬಾರಿಗೆ ಕೆಲಸಕ್ಕೆ ಸೇರುವ ಉದ್ಯೋಗಿಗಳಿಗೆ ಕಂಪನಿಯ ಸಂಬಳದ ಜೊತೆಗೆ ಸರ್ಕಾರ ಕೂಡ ಮೊದಲ ತಿಂಗಳ ಸಂಬಳ ನೀಡುವುದಾಗಿ ಘೋಷಣೆ ಮಾಡಲಾಗಿದೆ.
ಉದ್ಯೋಗಿಗಳಿಗೆ ಬಂಪರ್ ಸುದ್ದಿ! ಸರ್ಕಾರದಿಂದ ಸಂಬಳ..
ಇದೇ ಮೊಟ್ಟ ಮೊದಲ ಬಾರಿಗೆ ಸರ್ಕಾರ ಮೊದಲ ತಿಂಗಳ ಸಂಬಳ ಕೊಡುವುದಾಗಿ ಘೋಷಣೆ ಮಾಡಿದೆ. ಮೊದಲ ಬಾರಿಗೆ ಕೆಲಸಕ್ಕೆ ಸೇರುವ ಉದ್ಯೋಗಿಗಳಿಗೆ ಸರ್ಕಾರ ಒಂದು ತಿಂಗಳ ಸಂಬಳ ನೀಡಲಿದೆ ಎಂದು ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಇದು ಮೊದಲನೇ ಬಾರಿಗೆ ಕೆಲಸಕ್ಕೆ ಸೇರುವ ಅಥವಾ ಊರಿಂದ ಊರಿಗೆ ಬಂದು ಕೆಲಸಕ್ಕೆ ಸೇರುವ ಉದ್ಯೋಗಿಗಳಿಗೆ ಬಹಳ ಸಹಾಯವಾಗಲಿದೆ. ಒಂದು ಲಕ್ಷದ ವರೆಗೂ ಸಂಬಳ ಇರುವ ಉದ್ಯೋಗಿಗಳಿಗೆ ಕಂಪನಿ ಸಂಬಳದ ಜೊತೆ ಮೊದಲ ತಿಂಗಳ ಸಂಬಳವನ್ನು ಸರ್ಕಾರ ನೀಡಲಿದೆ.
ರೈತಾಪಿ ವರ್ಗದವರಿಗೆ ಹಾಗೂ ಯುವಕರಿಗೆ ಹೆಚ್ಚಿನ ಒತ್ತು!
ಕೆಲಸಕ್ಕೆ ದೂರದ ಊರುಗಳಿಂದ ಬರುವ ಉದ್ಯೋಗಿಗಳಿಗೆ ಇದು ಬಹಳ ಸಹಾಯವಾಗಲಿದೆ. ಕಂಪನಿ ಸಂಬಳ ಜೊತೆ ಸರ್ಕಾರ ಒಂದು ತಿಂಗಳ ಸಂಬಳ ಕೊಟ್ರೆ ಉದ್ಯೋಗಿಗಳಿಗೆ ವಸತಿ ಕಲ್ಪಿಸಿಕೊಳ್ಳಲು ಸಹಾಯವಾಗಲಿದೆ. ಇನ್ನೂ ಈ ಬಾರಿಯ ಬಜೆಟ್ನಲ್ಲಿ ಮುಖ್ಯವಾಗಿ ರೈತಾಪಿ ವರ್ಗ ಮತ್ತು ಯುವಕರಿಗೆ ಹೆಚ್ಚಿನ ಒತ್ತು ನೀಡಲಾಗಿದೆ.ಯಾವುದೇ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ ಮೊದಲ ತಿಂಗಳ ಸಂಬಳದ ಜೊತೆ ಸರ್ಕಾರವೂ ಒಂದು ತಿಂಗಳ ಸಂಬಳವನ್ನು ಸೇರಿಸಿ ಉದ್ಯೋಗಿಗೆ ನೀಡಲಾಗುತ್ತೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಯುವಕರ ಹೊಸ ಉದ್ಯೋಗಕ್ಕಾಗಿ 5 ಹೊಸ ಯೋಜನೆಯನ್ನು ಘೋಸಿಸಲಾಗಿದೆ. 5 ವರ್ಷದಲ್ಲಿ 20 ಲಕ್ಷ ಯುವಕರಿಗೆ ಕೌಶಲ್ಯದ ಮೇಲೆ ಗಮನ ಹರಿಸಲಾಗುತ್ತೆ.
ಮೊದಲ ಬಾರಿಗೆ ಉದ್ಯೋಗಾಕಾಂಕ್ಷಿಗಳಾಗಿರುವವರಿಗೆ ದೊಡ್ಡ ಸಹಾಯ ದೊರೆಯಲಿದೆ. ಔಪಚಾರಿಕ ವಲಯದಲ್ಲಿ ಮೊದಲ ಬಾರಿಗೆ ಉದ್ಯೋಗ ಆರಂಭಿಸುವವರಿಗೆ ಒಂದು ತಿಂಗಳ ವೇತನವನ್ನು ಸರ್ಕಾರದ ವತಿಯಿಂದ ನೀಡಲಾಗುವುದು.