ಮೈಸೂರು: ತವರು ಜಿಲ್ಲೆ ಮೈಸೂರನ್ನು ಗೆಲ್ಲಬೇಕು, ಚಾಮರಾಜನಗರ ಮರಳಿ ಪಡೆಯಲು ಸಿಎಂ ಸಿದ್ದರಾಮಯ್ಯ ನೇರವಾಗಿ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ. ಇಂದು ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡಿರುವ ಸಿದ್ದರಾಮಯ್ಯ ಅವರು ಲೋಕಸಭಾ ಚುನಾವಣೆ ಸಂಬಂಧ ಕಾಂಗ್ರೆಸ್ ನಾಯಕರೊಂದಿಗೆ ಮಹತ್ವದ ಸಭೆ ನಡೆಸಿದರು. ಈ ಸಭೆಯಲ್ಲಿ ಮೈಸೂರು ಮತ್ತು ಚಾಮರಾಜನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವಿಗೆ ಬೇಕಾದ ಮಾನದಂಡಗಳ ಬಗ್ಗೆ ಚರ್ಚಿಸಿದರು. ಅದರಲ್ಲೂ ಮುಖ್ಯವಾಗಿ ಯದುವೀರ್ ಟಾರ್ಗೆಟ್ ಬೇಡ. ಬಿಜೆಪಿ ಅಷ್ಟೆ ನಮ್ಮ ಟಾರ್ಗೆಟ್. ಯದುವೀರ್ ಮಹರಾಜ ಅನ್ನುವುದಕ್ಕಿಂತ ಬಿಜೆಪಿ ಅಭ್ಯರ್ಥಿ ಅನ್ನುವುದಷ್ಟೆ ಇರಲಿ. ಭಾಷಣ ಮಾಡವಾಗ ಎಚ್ಚರ ಇರಲಿ. ಯದುವೀರ್ ವಿರುದ್ಧ ಸಿಕ್ಕ ಸಿಕ್ಕಾಗೆ ಹೇಳಿಕೆ ಕೊಡಬೇಡಿ ಎಂದು ಮುಖಂಡರಿಗೆ ಕಿವಿ ಮಾತು ಹೇಳಿದ್ದಾರೆ.
ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ನಡೆದ ಸಭೆಯಲ್ಲಿ ಸಿದ್ದರಾಮಯ್ಯ ಅವರು ಮುಖಂಡರು, ಶಾಸಕರು, ಸಚಿವರಿಗೆ ಕೆಲ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಯದುವೀರ್ ಟಾರ್ಗೆಟ್ ಬೇಡ. ಬಿಜೆಪಿ ಅಷ್ಟೆ ನಮ್ಮ ಟಾರ್ಗೆಟ್. ಯದುವೀರ್ ಮಹರಾಜ ಅನ್ನುವುದಕ್ಕಿಂತ ಬಿಜೆಪಿ ಅಭ್ಯರ್ಥಿ ಅನ್ನುವುದಷ್ಟೆ ಇರಲಿ. ಭಾಷಣ ಮಾಡವಾಗ ಎಚ್ಚರ ಇರಲಿ. ಯದುವೀರ್ ವಿರುದ್ಧ ಸಿಕ್ಕ ಸಿಕ್ಕಾಗೆ ಹೇಳಿಕೆ ಕೊಡಬೇಡಿ. ಎಮೋಷನಲ್ ವಿಚಾರವನ್ನ ತಿರುಗಿಸುವಲ್ಲಿ ಬಿಜೆಪಿಯವರು ನಿಸ್ಸೀಮರು. ಹೀಗಾಗಿ ಬಿಜೆಪಿಯವರಿಗೆ ನಿಮ್ಮ ಹೇಳಿಕೆ ಆಹಾರವಾಗಬಾರದು. ಈ ಕಾರಣದಿಂದ ಯದುವೀರ್ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಲಿ ಎಂದು ಸಭೆಯಲ್ಲಿ ಮುಖಂಡರು ಹಾಗೂ ಶಾಸಕರುಗಳಿಗೆ ಸಿಎಂ ಸಿದ್ದರಾಮಯ್ಯ ಹೇಳಿದರು.