ಪ್ರತಿನಿಧಿ ವರದಿ ಹನೂರು
ಗೌರಿ ಗಣೇಶ ಹಬ್ಬದ ಪ್ರಯುಕ್ತ ಸಾಮಗ್ರಿಗಳನ್ನು ಖರೀದಿಸಲು ಜನರು ಮುಗಿಬಿದ್ದ ದೃಶ್ಯ ಪಟ್ಟಣದಲ್ಲಿ ಶುಕ್ರವಾರ ಕಂಡು ಬಂದಿತು.
ಪಟ್ಟಣದ ಅಂಗಡಿ ಬೀದಿಗಳಲ್ಲಿ ಜನರು ಹಬ್ಬದ ಪ್ರಯುಕ್ತ ಹೂ ಹಣ್ಣು ಹಾಗೂ ಇನ್ನಿತರ ಹಬ್ಬದ ಸಾಮಗ್ರಿಗಳನ್ನು ಖರೀದಿಸಲು ಜನರು ಮುಗಿಬಿದ್ದರು.
ಜನ ಜಂಗುಳಿ: ಪಟ್ಟಣದಲ್ಲಿರುವ ಹೂ ಹಣ್ಣು ಹಾಗೂ ಬಟ್ಟೆ ಅಂಗಡಿಗಳಿಗೆ ಜನರು ಸಮಯ ಲೆಕ್ಕಿಸದೆ ಹೊಸದು ಬಟ್ಟೆ ಹಾಗೂ ಹೂ ಹಣ್ಣು ಸಾಮಗ್ರಿಗಳ ಖರೀದಿಗೆ ಮುಗಿಬಿದ್ದರು ಇದರಿಂದ ವ್ಯಾಪಾರಸ್ಥರಿಗೆ ಅನುಕೂಲವಾಯಿತು.
ಹಬ್ಬದ ಸಂಭ್ರಮ: ಗೌರಿ ಗಣೇಶ ಹಣ್ಣದ ಸಂಭ್ರಮ ಜನರಲ್ಲಿ ಸಂತೋಷ ಮನೆ ಮಾಡಿತ್ತು ಜನರು ಯಾವುದೇ ಅಂಗಡಿಗೆ ಹೋದರು ಸಹ ತುಂಬಿ ತುಳುಕುತ್ತಿದ್ದದ್ದು ಸಾಮಾನ್ಯವಾಗಿತ್ತು.