ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಗಲಿಗೆ ಅಂಟಿಕೊಂಡಿರುವ ಮುಡಾ ಹಗರಣ ಸದ್ಯಕ್ಕೆ ದೂರಾವಾಗುವ ಲಕ್ಷಣ ಕಾಣಿಸುತ್ತಿಲ್ಲ. ಒಂದೆಡೆ ಬಿಜೆಪಿ ಹಾಗೂ ಜೆಡಿಎಸ್ ಒಗ್ಗೂಡಿ ರಾಜ್ಯ ಸರ್ಕಾರದ ವಿರುದ್ಧ ಪಾದಯಾತ್ರೆ ಮೂಲಕ ಹೋರಾಟ ಆರಂಭಿಸಿದ್ದರೆ. ಇತ್ತ ಸಿಎಂ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿರುವ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಸೋಮವಾರ ಮೈಸೂರಿನ ಮುಡಾ ಕಚೇರಿಗೆ ಆಗಮಿಸಿ ಮುಡಾ ಆಯುಕ್ತರನ್ನು ಭೇಟಿಯಾಗಿದ್ದಾರೆ.
ಸಿಎಂ ತವರಿಗೆ ಆಗಮಿಸಿರುವ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಮುಡಾ ಆಯುಕ್ತರನ್ನು ಭೇಟಿಯಾಗುವ ಮೂಲಕ ಹಗರಣ ವಿಚಾರದ ಕುರಿತು ಚರ್ಚೆಯನ್ನು ನಡೆಸಿದ್ದಾರೆ ಎನ್ನಲಾಗಿದ್ದು, ಸಾಮಾಜಿಕ ಕಾರ್ಯಕರ್ತನ ಈ ನಡೆ ಇದೀಗ ಸಾಕಷ್ಟು ಕುತೂಹಲ ಮೂಡಿಸಿದೆ.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು ಸಿಎಂ ಸಿದ್ದರಾಮಯ್ಯ ಕಡೆಯಿಂದ ಅನೇಕ ಪ್ರತಿಕ್ರಿಯೆಗಳು ಬಂದಿವೆ. ಈಗ ನಾನು ಸಿದ್ದರಾಮಯ್ಯ ಬಗ್ಗೆ ಮಾತಾನಾಡಿದ್ದಕ್ಕೆ ಬ್ಲಾಕ್ ಮೇಲರ್ ಆಗಿದ್ದೇನೆ.ಆದರೆ ಜಗದೀಶ್ ಶೆಟ್ಟರ್, ಯಡಿಯೂರಪ್ಪ ಬಗ್ಗೆ ನಾನು ಆರೋಪ ಮಾಡಿದ್ದರೆ ಆಗ ನಾನು ಸತ್ಯ ಹೇಳುತ್ತಿದ್ದೆ ಎನ್ನುತ್ತಿದ್ದರು.
2001ರಲ್ಲಿಯೇ ಕೆಸರೆಯಲ್ಲಿ ಅಭಿವೃದ್ಧಿ ಮಾಡಿದ್ದ ಬಡಾವಣೆಯನ್ನ 2004ರಲ್ಲಿ ಮಲ್ಲಿಕಾರ್ಜುನಸ್ವಾಮಿ ಕೃಷಿ ಭೂಮಿಯನ್ನಾಗಿ ಖರೀದಿ ಮಾಡಿದ್ದಾರೆ. ಹೇಗೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಸಿಎಂ ಕುಟುಂಬಕ್ಕೆ ಮಂಜೂರಾಗಿರುವ 14 ಅಕ್ರಮ ಸೈಟ್ ಗಳನ್ನು ವಾಪಾಸ್ ಪಡೆಯಿರಿ. ನನ್ನ ಪ್ರಕಾರವಾಗಿ 55 ಕೋಟಿ ಮುಡಾ ಗೆ ನಷ್ಟವಾಗಿದೆ. ಆದರೆ ಡಿಕೆಶಿ ಯಂತಹ ಪಂಡಿತರು, ಪರಿಣಿತರು ನನ್ನ ಪ್ರಶ್ನೆಗೆ ಉತ್ತರ ಕೊಡದೆ ಸುಖಾ ಸುಮ್ಮನೆ ಸಿಎಂ ಏನೂ ತಪ್ಪು ಮಾಡಿಲ್ಲ ಅಂತೇಳಿ ಭಾಷಣ ಮಾಡುತ್ತಿದ್ದಾರೆ. ಇಂತಹ ಕಾರಣಕ್ಕೆ ಪ್ರಾಸಿಕ್ಯೂಷನ್ ಕೊಡಬಾರದು ಅಂತಾ ಹೇಳಿ ಹಾಗೆಯೇ ನಾನು ಹೇಳಿರುವುದು ತಪ್ಪು ಅಂತಾ ಫ್ರೂವ್ ಮಾಡಿ ಎಂದು ಟಿ ಜೆ ಅಬ್ರಾಹಂ ಹೇಳಿದ್ದಾರೆ.