ಬೆಂಗಳೂರು, ನವೆಂಬರ್ 29, 2024: ಸ್ಯಾಂಡಲ್ ವುಡ್ ನ ಹಾಟ್ ಬ್ಯೂಟಿ ನಟಿ ರಮ್ಯಾಗೆ ಇಂದು ಬರ್ತ್ ಡೇ ಸಂಭ್ರಮ. ನಟನೆಯಿಂದ ದೂರ ಸರಿದಿದ್ರೂ ನಟಿ ರಮ್ಯಾ ಇವತ್ತಿಗೂ ಅಭಿಮಾನಿಗಳ ಪಾಲಿನ ಹಾಟ್ ಫೇವರೇಟ್. ವಯಸ್ಸು 42 ಆದ್ರೂ ಆಕೆಯ ಬ್ಯುಟಿ ಮಾತ್ರ ಚೂರು ಕಡಿಮೆ ಆಗಿಲ್ಲ.

ಸದ್ಯ ನಟಿ ರಮ್ಯ ತಮ್ಮ ಜನ್ಮದಿನವನ್ನು ಕೀನ್ಯಾದ ಮಸಾಯಿ ಮಾರ ರಾಷ್ಟ್ರೀಯ ಮೀಸಲು ಪ್ರದೇಶದಲ್ಲಿ ಆಚರಿಸಿಕೊಂಡಿದ್ದಾರೆ. ಇತ್ತೀಚೆಗೆ ಅಭಿನಯದಿಂದ ದೂರ ಉಳಿದಿರುವ ರಮ್ಯಾ ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಅವರ ಆಪ್ತ ಗೆಳೆಯ ಸಂಜೀವ್ ಮೋಹನ್ ಅವರು ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ನಟಿ ರಮ್ಯಾ ಅವರು ಚಿತ್ರರಂಗದಿಂದ ದೂರ ಉಳಿದುಕೊಂಡಿದ್ದಾರೆ. ನಟಿಯಾಗಿ ಕಂಬ್ಯಾಕ್ ಮಾಡಬೇಕು ಎಂದು ಅವರು ಅಂದುಕೊಳ್ಳುತ್ತಿದ್ದರೂ ಅದಕ್ಕೆ ಸಮಯ ಕೂಡಿ ಬರುತ್ತಿಲ್ಲ. ಅವರು ಯಾವುದೇ ಹೊಸ ಸಿನಿಮಾ ಕೂಡ ಘೋಷಣೆ ಮಾಡಿಲ್ಲ. ಈಗ ರಮ್ಯಾ ಅವರ ಕೆಲ ಫೋಟೋಗಳು ವೈರಲ್ ಆಗಿವೆ. ಕೀನ್ಯಾದ ಮಸಾಯಿ ಮಾರ ರಾಷ್ಟ್ರೀಯ ಮೀಸಲು ಭಾಗದಲ್ಲಿ ಅವರು ಜನ್ಮದಿನ ಆಚರಿಸಿಕೊಂಡಿದ್ದಾರೆ. ಗೆಳೆಯರ ಜೊತೆ ಈ ಭಾಗದಲ್ಲಿ ಸುತ್ತಾಟ ನಡೆಸಿದ್ದಾರೆ.
ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾದಲ್ಲಿ ಅವರು ಅತಿಥಿ ಪಾತ್ರ ಮಾಡಿದ್ದರು. ತಮ್ಮ ಒಪ್ಪಿಗೆ ಇಲ್ಲದೆ ದೃಶ್ಯಗಳನ್ನು ಬಳಕೆ ಮಾಡಲಾಗಿದೆ ಎಂದು ರಮ್ಯಾ ಆರೋಪಿಸಿ ಕೋರ್ಟ್ ಮೆಟ್ಟಿಲೇರಿದ್ದರು. ಧನಂಜಯ್ ನಟನೆಯ ‘ಉತ್ತರಕಾಂಡ’ ಸಿನಿಮಾದಲ್ಲಿ ಅವರು ನಾಯಕಿ ಆಗಿ ನಟಿಸಬೇಕಿತ್ತು. ಆದರೆ, ಈ ಚಿತ್ರದಿಂದ ಅವರು ಹೊರಕ್ಕೆ ಬಂದಿದ್ದಾರೆ.
10 ವರ್ಷ ಸ್ಯಾಂಡಲ್ವುಡ್ ಆಳಿ ಸ್ಟಾರ್ ನಟಿ ಎನಿಸಿಕೊಂಡಿದ್ದ ರಮ್ಯಾ ಬರ್ತ್ ಡೇ ಯನ್ನ ಫ್ಯಾನ್ಸ್ ಕೂಡ ಸೆಲೆಬ್ರೇಟ್ ಮಾಡಿ ಖುಷಿಪಟ್ಟಿದ್ದಾರೆ. ಕಮೆಂಟ್ಸ್ ನಲ್ಲಿ ಬರ್ತ್ ಡೇ ವಿಶ್ ಮಾಡಿ ನೆಚ್ಚಿನ ಹೀರೋಯಿನ್ ಗೆ ಶುಭಾಶಯ ಕೋರಿದ್ದಾರೆ.
