ರಾಮನಗರ: ಟೊಯೊಟಾ ತಾಂತ್ರಿಕ ತರಬೇತಿ ಸಂಸ್ಥೆಯು (ಟಿಟಿಟಿಐ) 2024ನೇ ಸಾಲಿನಲ್ಲಿ ಕಾಯಂ ಹಾಗೂ ಕೌಶಲ ತರಬೇತಿ ಕೋರ್ಸ್ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಿದೆ. ಕೋ ಗ್ರಾಮೀಣ ಪ್ರದೇಶದ ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಇಲ್ಲಿ ಉಚಿತವಾಗಿ ತರಬೇತಿ ನೀಡಲಾಗುತ್ತದೆ.
ಕೋರ್ಸ್ ಅವಧಿ ವಸತಿ ಸಹಿತ ಮೂರು ವರ್ಷವಾಗಿದ್ದು, ಅಭ್ಯರ್ಥಿಗಳಿಗೆ ಸಮಗ್ರ ತರಬೇತಿ ನೀಡಲಾಗುತ್ತದೆ. ಟೊಯೊಟಾ ಕೌಶಲ ಕಾರ್ಯಕ್ರಮದ ಜೊತೆಗೆ ಜ್ಞಾನ ಮತ್ತು ನಡವಳಿಕೆ ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸಲಾಗಿದೆ. ಇದು ಉತ್ಪಾದನಾ ಉದ್ಯಮಕ್ಕೆ ನಿರ್ಣಾಯಕವಾದ ಕೌಶಲಗಳೊಂದಿಗೆ ಯುವಜನರನ್ನು ಸಜ್ಜುಗೊಳಿಸಲು ವಿನ್ಯಾಸಗೊಳಿಸಿರುವ ಎರಡು ವರ್ಷಗಳ ವಸತಿ ಕೋರ್ಸ್ ಇದಾಗಿದೆ.
‘ಟಿಟಿಟಿಐ ತರಬೇತಿಯು ಗ್ರಾಮೀಣ ಯುವಜನರನ್ನು ವಿಶ್ವದರ್ಜೆಯ ಸ್ಪರ್ಧಾತ್ಮಕ ತಂತ್ರಜ್ಞರನ್ನಾಗಿ ರೂಪಿಸುತ್ತದೆ. ತರಬೇತಿ ಪಡೆದ ವಿದ್ಯಾರ್ಥಿಗಳು ಭಾರತ, ಜಪಾನ್ ಮತ್ತು ಮಧ್ಯಪ್ರಾಚ್ಯ ದೇಶಗಳು ಸೇರಿದಂತೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.’ ಎಂದು ಟಿಕೆಎಂನ ಹಣಕಾಸು ಮತ್ತು ಆಡಳಿತದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಜಿ. ಶಂಕರ ತಿಳಿಸಿದ್ದಾರೆ. ‘ನಮ್ಮಲ್ಲಿ ತರಬೇತಿ ಪಡೆದವರು ರಾಷ್ಟ್ರೀಯ ಕೌಶಲ್ಲ ಸ್ಪರ್ಧೆ ಮತ್ತು ವಿಶ್ವ ಕೌಶಲ ಸ್ಪರ್ಧೆಯಂತಹ ಪ್ರತಿಷ್ಠಿತ ಸ್ಪರ್ಧೆಗಳಲ್ಲಿ ಪ್ರಶಂಸನೀಯ ಸಾಧನೆಗಳನ್ನು ಮಾಡಿದ್ದಾರೆ. ಟಿಟಿಟಿಐ ಇತ್ತೀಚೆಗೆ ತನ್ನ ದಾಖಲಾತಿ ಸಮಾರ್ಥ್ಯವನ್ನು 600ರಿಂದ 1200ಕ್ಕೆ ಹೆಚ್ಚಿಸಿದೆ. ಇದರಲ್ಲಿ 600 ಮಹಿಳಾ ವಿದ್ಯಾರ್ಥಿಗಳು ಇರಲಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.
ಮಾಹಿತಿಗೆ https://forms.office.com/r/UxSGWqBcGU ಲಿಂಕ್ ಗೆ ಬೇಟಿ ನೀಡಿ ಹೆಸರು ನೋಂದಾಯಿಸಿ. ವೆಬ್ಸೈಟ್ ವಿಳಾಸ: toyotabharat.com. ಸಂಪರ್ಕ ಸಂಖ್ಯೆ: 8050673677, 9591999667, 080 66292546.