2024-25 ನೇ ಸಾಲಿನ ಬಜೆಟ್ ಅನ್ನು ಇಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ್ದಾರೆ. ಇನ್ನೂ ಈ ಬಾರಿಯ ಬಜೆಟ್ ನಲ್ಲಿ ಯಾವುದೆಲ್ಲಾ ಹಗ್ಗ? ಯಾವುದೆಲ್ಲಾ ತುಟ್ಟಿ? ಇಲ್ಲಿದೆ ಲಿಸ್ಟ್..!
ಯಾವುದು ಅಗ್ಗ?
• ಚಿನ್ನ, ಬೆಳ್ಳಿ, ಪ್ಲಾಟಿನಂ ಮೇಲಿನ ಆಮದು ಸುಂಕ ಕಡಿತ, ಬೆಲೆ ಇಳಿಕೆ.
ತಾಮ್ರದ ಮೇಲೂ ತೆರಿಗೆ ಕಡಿತ.
• ಮೊಬೈಲ್ ಫೋನ್ ಬಿಡಿ ಭಾಗಗಳ ಮೇಲಿನ ತೆರಿಗೆ ಇಳಿಕೆ
• ಮೊಬೈಲ್ ಫೋನ್ ಬೆಲೆ ಇಳಿಕೆ
• ಮೊಬೈಲ್ ಫೋನ್ ಚಾರ್ಜರ್ ಬೆಲೆ ಇಳಿಕೆ
• ಕ್ಯಾನ್ಸರ್ ಔಷಧದ ಬೆಲೆ ಇಳಿಕೆ
• ಸೋಲಾರ್ ಪ್ಯಾನಲ್ಗಳ ಬೆಲೆ ಇಳಿಕೆ
• ವಿದ್ಯುತ್ ತಂತಿ & ಎಕ್ಸ್ ರೇ ಉಪಕರಣಗಳ ಬೆಲೆ ಇಳಿಕೆ
• ಆದಾಯ ತೆರಿಗೆ ಪದ್ಧತಿ ಮತ್ತಷ್ಟು ಸರಳೀಕರಣ
• ವಿದೇಶಿ ಬಟ್ಟೆ, ಚರ್ಮೋತ್ಪನ್ನಗಳು, ಟಿವಿ ಅಗ್ಗವಾಗಲಿದೆ
• 20 ಖನಿಜಗಳ ಮೇಲೆ ಅಬಕಾರಿ ಸುಂಕ ಇಳಿಕೆ
• ಇಕಾಮರ್ಸ್ ಮೇಲಿನ ಟಿಡಿಎಸ್ ಶೇ 1ರಿಂದ ಶೇ 0,1ಕ್ಕೆ ಇಳಿಕೆ
• ಸ್ಟಾರ್ಟ್ಅಪ್ ವ್ಯವಸ್ಥೆ: ಏಂಜೆಲ್ ಟ್ಯಾಕ್ಸ್ ರದ್ದು.
ಬಜೆಟ್ ನಲ್ಲಿ ಯಾವುದೆಲ್ಲಾ ದುಬಾರಿ??
• ಮರು ಬಳಕೆ ಆಗದ ಎಲ್ಲಾ ರೀತಿಯ ಪ್ಲಾಸ್ಟಿಕ್ ವಸ್ತುಗಳ ಬೆಲೆ ಏರಿಕೆ
• ವಿವಿಧ ರೀತಿಯ ಬಟ್ಟೆ, ವಸ್ತ್ರಗಳ ಬೆಲೆ ಏರಿಕೆ
• ಎಲ್ಲಾ ರೀತಿಯ ವಿದ್ಯುತ್ ಉಪಕರಣಗಳ ಬೆಲೆ ಏರಿಕೆ
• ಮೊಬೈಲ್ ಟವರ್ ಬಿಡಿ ಭಾಗಗಳ ಬೆಲೆ ಏರಿಕೆ
• ಸ್ಟೇಟ್ ಸ್ಟ್ಯಾಂಪ್ ಡ್ಯೂಟಿ ಹೆಚ್ಚಳಕ್ಕೆ ರಾಜ್ಯ ಸರ್ಕಾರಗಳಿಗೆ ಅವಕಾಶ
ಒಟ್ಟಾರೆ ಈ ಬಾರಿಯ ಬಜೆಟ್ ಏರಿಳಿತದಲ್ಲಿ ವಿದ್ಯುತ್ ತಂತಿ, ಎಕ್ಸರೇ ಮಿಷನ್, ಕ್ಯಾನ್ಸರ್ ಔಷಧಗಳ ಬೆಲೆಯಲ್ಲಿ ಇಳಿಕೆ ಮಾಡುವ ಮೂಲಕ ದೇಶದ ಜನತೆಯ ಆರೋಗ್ಯ ಸ್ನೇಹಿ ನಿಲುವನ್ನ ಸರ್ಕಾರ ಅನುಸರಿಸಿದೆ.ಅಲ್ಲದೆ ಪರಿಸರಕ್ಕೆ ಮಾರಕವಾದ, ಮರು ಬಳಕೆ ಮಾಡಲು ಸಾಧ್ಯವೇ ಆಗದ ಪ್ಲಾಸ್ಟಿಕ್ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಸರ್ಕಾರ ಪರಿಸರ ಸ್ನೇಹಿ ನಿಲುವು ಅನುಸರಿಸಿದೆ. ಹಾಗೂ ಮೊಬೈಲ್ , ಚಿನ್ನ, ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್ ನೀಡಿದೆ.