ಮೈಸೂರು: ಚನ್ನಪಟ್ಟಣದಲ್ಲಿ ಯೋಗೇಶ್ವರ್ ಅತುರದ ಕ್ರಮ ಕೈಗೊಂಡರು ಉಪ ಚುನಾವಣೆ ಮೂಲಕ ಜನರು ಎಚ್ಚರಿಕೆಯ ಗಂಟೆ ಬಾರಿಸುತ್ತಾರೆ. ಮೂರು ಕ್ಷೇತ್ರಗಳಲ್ಲೂ ಎನ್ ಡಿ ಎ ಅಭ್ಯರ್ಥಿಗಳು ಗೆಲುತ್ತಾರೆ ಎಂದು ಮೈಸೂರಿನಲ್ಲಿ ಇಂದು ಕೇಂದ್ರ ಸಚಿವ ವಿ ಸೋಮಣ್ಣ ಹೇಳಿಕೆ ನೀಡಿದ್ದಾರೆ.
ಮೈಸೂರಿನ ಮಾನಸ ಗಂಗೋತ್ರಿಯ ಆಯುಷ್ ಇಲಾಖೆಯ ಸಭಾಂಗಣದಲ್ಲಿ ಆಯೋಜಿಸಿದ್ದ ರೋಜ್ ಗಾರ್ ಮೇಳ ಕಾರ್ಯಕ್ರಮದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಡಾ ಹಗರಣ ತಾರ್ಕಿಕ ಅಂತ್ಯಕ್ಕೆ ಹೋಗುತ್ತದೆ. ಭೈರತಿ ಸುರೇಶ್ ತಾನು ಮಂತ್ರಿ ಎಂಬುದನ್ನೇ ಮರೆತು ಮಾತನಾಡುತ್ತಿದ್ದಾರೆ ಸಹೋದರಿ ಶೋಭಕರಂದ್ಲಾಜೆ ಪುಟ್ಟವಿಟ್ಟ ಚಿನ್ನವಿದ್ದಂತೆ ಅವರ ಬಗ್ಗೆ ಕೀಳಾಗಿ ಮಾತನಾಡಬೇಡಿ ಎಂದಿದ್ದಾರೆ. ಇನ್ನು ಚನ್ನಪಟ್ಟಣದಲ್ಲಿ ಯೋಗೇಶ್ವರ್ ಅತುರದ ಕ್ರಮ ಕೈಗೊಂಡರು ಉಪ ಚುನಾವಣೆ ಮೂಲಕ ಜನರು ಎಚ್ಚರಿಕೆಯ ಗಂಟೆ ಬಾರಿಸುತ್ತಾರೆ. ಮೂರು ಕ್ಷೇತ್ರಗಳಲ್ಲೂ ಎನ್ ಡಿ ಎ ಅಭ್ಯರ್ಥಿಗಳು ಗೆಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮುಡಾದಲ್ಲಿ ಬಹುಕೋಟಿ ಅಕ್ರಮ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಇದು ಜನಪ್ರತಿನಿಧಿಗಳು ತಲೆ ತಗ್ಗಿಸುವ ವಿಚಾರ. ಮುಡಾದಲ್ಲಿ ಇಷ್ಟೊಂದು ಅಕ್ರಮ ಆಗಿದೆ ಅಂದುಕೊಂಡಿರಲಿಲ್ಲ.ನಾನು ಈ ಹಿಂದೆ ಮೈಸೂರು ಜಿಲ್ಲಾ ಮಂತ್ರಿಯಾಗಿದ್ದಾಗ, ನಾನು ಮತ್ತು ಪ್ರತಾಪ್ ಸಿಂಹ ಎಲ್ಲರೂ ಕೂಡ ಮುಡಾದ ಸೈಟುಗಳ ಬಗ್ಗೆ ಮಾಹಿತಿ ಪಡೆದಿದ್ದೆವು. 7200 ಸೈಟುಗಳನ್ನು ಪತ್ತೆ ಹಚ್ಚಿ ಹರಾಜು ಹಾಕಲು ತೀರ್ಮಾನ ಮಾಡಿದ್ದೆವು.
ಈ ಹಿಂದೆ ಮೈಸೂರು ಡಿಸಿಯಾಗಿದ್ದ ಅಭಿರಾಮ್ ಜಿ ಶಂಕರ್, ಮುಡಾ ಆಯುಕ್ತರಾಗಿದ್ದ ಕಾಂತರಾಜು ಎಲ್ಲರೂ ಜನರ ಪರ ಕೆಲಸ ಮಾಡಲು ನಿರ್ಧಾರ ಮಾಡಿದ್ದೆವು. ಆದರೆ ಅದು ಸಾಧ್ಯವಾಗಲಿಲ್ಲ. ಈಗ ತನಿಖೆಗಳು ನಡೆಯುತ್ತಿದೆ, ಅಕ್ರಮ ಹೊರ ಬರಲಿ ಎಂದು ಮೈಸೂರಿನಲ್ಲಿ ಕೇಂದ್ರ ಸಚಿವ ವಿ ಸೋಮಣ್ಣ ಹೇಳಿಕೆ ನೀಡಿದರು.