ಮೈಸೂರು: ಯೋಗೇಶ್ವರ್ ನಮ್ಮ ಪಕ್ಷಕ್ಕೆ ಬಂದಿರುವುದು ಸಂತೋಷದ ವಿಚಾರ. ನಮ್ಮ ಪಕ್ಷದಲ್ಲೂ ಬಹಳಷ್ಟು ಜನ ಅಭ್ಯರ್ಥಿಗಳಿದ್ದರು. ಆದರೂ ಬೇರೆ ಪಕ್ಷದಿಂದ ಬಂದ ಅಭ್ಯರ್ಥಿಗೆ ನಾವು ಟಿಕೆಟ್ ಕೊಟ್ಟಿದ್ದೇವೆ ಎಂದರೆ ಪಕ್ಷದ ಉದಾರತನ ಎಂತಹದ್ದು ಎಂಬುದನ್ನು ಗಮನಿಸಿ. ಉಪಚುನಾವಣೆ ನಡೆಯುವ ಮೂರು ಕ್ಷೇತ್ರಗಳಲ್ಲೂ ನಾವು ಗೆಲ್ಲುತ್ತೇವೆ ಎಂದು ಮೈಸೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ ಹೆಚ್ ಸಿ ಮಹದೇವಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮುಡಾ ವಿಚಾರವಾಗಿ ಮಾತನಾಡಿ, ಕೆಲವು ಕಾರ್ಯಗಳು ಮುಡಾದಲ್ಲಿ ಸ್ಥಗಿತಗೊಂಡಿವೆ. ಅವುಗಳನ್ನು ಶುರು ಮಾಡಿ ಎಂದು ಡಿಸಿಗೆ ಹೇಳಿದ್ದೇನೆ. ದಸರಾ ಮುಗಿದಿದೆ, ಇನ್ನು ಆಡಳಿತ ಕಾರ್ಯಗಳು ಚುರುಕುಗೊಳ್ಳಬೇಕು.
ಆ ನಿಟ್ಟಿನಲ್ಲಿ ಅಧಿಕಾರಿಗಳ ಸಭೆ ನಡೆಸಿದ್ದೇನೆ ಎಂದು ಸಚಿವ ಡಾ. ಹೆಚ್ ಸಿ ಮಹದೇವಪ್ಪ ಮಾಹಿತಿ ನೀಡಿದರು.