ಡಿ ಬಾಸ್ ದರ್ಶನ್ ನಟನೆಯ ಸೂಪರ್ ಹಿಟ್ ಸಿನಿಮಾ ಕಾಟೇರ ನಿರ್ದೇಶಕ ತರುಣ್ ಸುಧೀರ್ ಮತ್ತು ಸುಂದರ ನಟಿ ಸೋನಾಲ್ ಮೊಂತೆರೊ ಸದ್ಯದಲ್ಲಿಯೇ ಶುಭವಿವಾಹವಾಗಲಿದ್ದಾರೆ. ಇವರಿಬ್ಬರ ಮದುವೆ ದಿನಾಂಕ ಮತ್ತು ಮದುವೆ ನಡೆಯುವ ಸ್ಥಳದ ಅಪ್ಡೇಟ್ ಕೂಡ ಇವತ್ತು ದೊರಕಿದೆ. ಸೋಷಿಯಲ್ ಮೀಡಿಯಾದಲ್ಲಿ ಸೋನಾಲ್ ಮತ್ತು ತರುಣ್ ತಮ್ಮ ಮದುವೆಯ ಶುಭಸುದ್ದಿಯ ಟ್ರೇಲರ್ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಈ ನಾಯಕಿಗೆ ಕೊನೆಗೂ ಜೀವನದ ನಿರ್ದೇಶಕ ಸಿಕ್ಕ ಎಂದು ನಿನ್ನೆಯಷ್ಟೇ ತಮ್ಮ ಇನ್ಸ್ಟಾ ಪೇಜ್ ನಲ್ಲಿ ಇವರು ಅಪ್ಡೇಟ್ ನೀಡಿದ್ದರು. ಇದೀಗ ತಮ್ಮ ಪ್ರೀವೆಡ್ಡಿಂಗ್ ಶೂಟಿಂಗ್ನ ವಿಡಿಯೋ ಹಂಚಿಕೊಂಡಿದ್ದಾರೆ. ಸಿನಿಮಾವೊಂದರ ಟ್ರೇಲರ್ ಅಥವಾ ಟೀಸರ್ನಂತೆ ಇವರಿಬ್ಬರು ಸಿನಿಮಾ ಟಾಕೀಸ್ನೊಳಗೆ ತಮ್ಮದೇ ಸಿನಿಮಾ ನೋಡುವಂತೆ ಈ ವಿಡಿಯೋ ಇದೆ.ವಿಶೇಷ ವಿಡಿಯೋ ಮೂಲಕ ತಮ್ಮ ಮದುವೆ ಸುದ್ದಿಯನ್ನು ತರುಣ್ ಮತ್ತು ಸೋನಲ್ ಹಂಚಿಕೊಂಡಿದ್ದಾರೆ.
ಸ್ಯಾಂಡಲ್ವುಡ್ನ ಸ್ಟಾರ್ ಡೈರೆಕ್ಟರ್ ಮತ್ತು ಬ್ಯೂಟಿಫುಲ್ ಹೀರೋಯಿನ್ ನಡುವೆ ಮುಂದಿನ ತಿಂಗಳು ಮದುವೆ ನಡೆಯಲಿದೆ. ಆಗಸ್ಟ್ 10 -11ರಂದು ಬೆಂಗಳೂರಿನಲ್ಲಿ ಇವರಿಬ್ಬರ ಶುಭ ವಿವಾಹ ನಡೆಯಲಿದೆ.ಬೆಂಗಳೂರಿನ ಕೆಂಗೇರಿ ಬಳಿ ಇರೋ ಪೂರ್ಣಿಮಾ ಕನ್ವೆಷನ್ ಹಾಲ್ನಲ್ಲಿ ವಿವಾಹ ನಡೆಯಲಿದೆ.ತರುಣ್ ಸುಧೀರ್ ಮತ್ತು ನಟಿ ಸೋನಾಲ್ ಮೊಂತೆರೊ ಹಂಚಿಕೊಂಡಿರುವ ವಿಡಿಯೋವನ್ನು ಪ್ರೀವೆಡ್ಡಿಂಗ್ ವಿಡಿಯೋ ಎಂದು ಕರೆಯಲು ಅಡ್ಡಿಯಿಲ್ಲ. ಸಿನಿಮಾ ಟಾಕೀಸ್ವೊಂದರಲ್ಲಿ ಇವರಿಬ್ಬರು ಪ್ರೀತಿಯ ಹೆಜ್ಜೆ ಹಾಕುತ್ತಿರುವ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.
ದರ್ಶನ್ ಜೈಲು ಪಾಲಾದ ನಂತರ ಮೊದಲ ಬಾರಿಗೆ ತರುಣ್ ಸುಧೀರ್ ಭೇಟಿ ಮಾಡಿದ್ದರು ತರುಣ್ ಸುಧೀರ್ ಲವ್ ಸ್ಟೋರಿ ಟ್ರ್ಯಾಕ್ಗೆ ತಂದಿದ್ದೆ ದರ್ಶನ್ ಎನ್ನಲಾಗ್ತಿದೆ. ತರುಣ್ ಹಾಗೂ ನಟಿ ಸೋನಲ್ ಮದುವೆಗೆ ದರ್ಶನ್ ಮುದ್ರೆ ಒತ್ತಿದ್ದರು. ದರ್ಶನ್ ಇಲ್ಲದೆ ಮದುವೆಯನ್ನು ಮುಂದಕ್ಕೆ ಹಾಕಲು ತರುಣ್ ಸಜ್ಜಾಗಿದ್ದರು ಎನ್ನಲಾಗಿತ್ತು. ಹಿರಿಯರ ಸಲಹೆ ನಂತರ ತರುಣ್ ಮುದುವೆಗೆ ಮುಂದಾಗಿದ್ದಾರೆ.
ರಾಬರ್ಟ್’ ಚಿತ್ರದಲ್ಲಿ ಸೋನಲ್ ಕಾಣಿಸಿಕೊಂಡಿದ್ದರು. ಈ ಸಿನಿಮಾ ಶೂಟಿಂಗ್ ಸಮಯದಲ್ಲೇ ತರುಣ್- ಸೋನಲ್ ನಡುವೆ ಪ್ರೀತಿ ಹುಟ್ಟಿತ್ತು ಎಂದು ಹೇಳಲಾಗುತ್ತಿದೆ. ಇನ್ನು ದರ್ಶನ್ ಕೂಡ ಆಗಾಗ ತರುಣ್ಗೆ ಮದುವೆ ಮಾಡಿಸಬೇಕು ಎನ್ನುತ್ತಿದ್ದರಂತೆ. ಹಾಗಾಗಿ ಶೂಟಿಂಗ್ ಸೆಟ್ನಲ್ಲಿ ತರುಣ್- ಸೋನಲ್ ಇಬ್ಬರನ್ನು ತಮಾಷೆಯಾಗಿ ರೇಗಿಸುತ್ತಿದ್ದರು, ಇದೇ ಸಮಯದಲ್ಲಿ ಇಬ್ಬರ ನಡುವೆ ಪ್ರೀತಿ ಮೂಡಿರಬಹುದು ಎನ್ನಲಾಗಿದೆ.