ಮಂಡ್ಯ: ಗಾಂಧಿನಗರದಿಂದ ಮಹಿಳೆ ನಾಪತ್ತೆಯಾಗಿದ್ದಾರೆ. ಲತಾ (34) ನಾಪತ್ತೆಯಾದವರು. ಏ.12ರ ರಾತ್ರಿ ನಡೆದಿರುವ ಪ್ರಕರಣ ಕುರಿತು ನಗರ ಪಶ್ವಿಮ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸೋಮವಾರ ಮಧ್ಯಾಹ್ನ 2 ಗಂಟೆಯಲ್ಲಿ ಮಹಿಳೆಯ ಪತ್ತೆಗೆ ಸಾರ್ವಜನಿಕ ಮಾಹಿತಿ ನೀಡಿದ್ದಾರೆ.
ಮನೆಯ ಬಳಿ ಅಂಗಡಿ ಇಟ್ಟುಕೊಂಡು ದಂಪತಿ ವ್ಯಾಪಾರ ಮಾಡಿಕೊಂಡಿದ್ದೇವು. ಅಂದು ವ್ಯಾಪಾರ ಮುಗಿಸಿ ಮನೆಗೆ ಬಂದಾಗ ಪತ್ನಿ ಮನೆಯಿಂದ ನಾಪತ್ತೆಯಾಗಿರುವ ಬಗ್ಗೆ ತಿಳಿಯಿತು ಎಂದು ಪತಿ ದೂರಿನಲ್ಲಿ ತಿಳಿಸಿದ್ದಾರೆ.
ಕಾಣೆಯಾದ ಮಹಿಳೆ 5.5 ಅಡಿ ಎತ್ತರ, ಕೋಲು ಮುಖ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಬಣ್ಣ, ಹೊಂದಿರುತ್ತಾರೆ. ಕನ್ನಡ ಬಾಷೆ ಮಾತನಾಡುತ್ತಾರೆ.ಎರಡು ಕೈಗಳಲ್ಲಿ ಹಸಿರು ಹಚ್ಚೆ ಇರುತ್ತದೆ. ಎಡಗೈಯಲ್ಲಿ ಹಳೆ ಗಾಯದ ಗುರುತು ಇರುತ್ತದೆ. ಮನೆಯಿಂದ ಹೊರ ಹೋಗುವಾಗ ಹಸಿರು ಬಣ್ಣದ ಟಾಪ್, ಕಪ್ಪು ಬಣ್ಣದ ಲೆಗಿನ್ಸ್ ಮತ್ತು ಕಪ್ಪು ಬಣ್ಣದ ವೇಲ್ ಧರಿಸಿರುತ್ತಾರೆ.
ಮಹಿಳೆಯ ಬಗ್ಗೆ ಸುಳಿವು ಸಿಕ್ಕಲ್ಲಿ ಎಸ್ಪಿ ಕಚೇರಿ ದೂ: 08232-224500 ಅಥವಾ ಪಶ್ಚಿಮಕ್ಕೆ ಠಾಣೆಯ ದೂ: 08232-224666 ನ್ನು ಸಂಪರ್ಕಿಸುವಂತೆ ಮನವಿ ಮಾಡಿದ್ದಾರೆ.
Leave a comment