– ಮೈಸೂರು-ಕೊಡಗು ಲೋಕಸಭಾ ಚುನಾವಣೆ
– ಎಲ್ಲ ಕ್ಷೇತ್ರಗಳಲ್ಲಿ ಮಹಿಳಾ ಮತದಾರರೇ ಹೆಚ್ಚು
ಸಿ. ದಿನೇಶ್
ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಚುನಾವಣಾ ಅಖಾಡ ರಂಗೇರಿದೆ. ಅವಳಿ ಜಿಲ್ಲೆಯ ಮತದಾರರ ಮನವೊಲಿಸಲು ಅಭ್ಯರ್ಥಿಗಳು ಭರ್ಜರಿ ಪ್ರಚಾರ ಆರಂಭಿಸಿದ್ದಾರೆ. ಪ್ರತಿಷ್ಠೆಯ ಕದನಕ್ಕೆ ಸಾಕ್ಷಿಯಾಗಲಿರುವ ಕ್ಷೇತ್ರದಲ್ಲಿ ಮಹಿಳಾ ಮತದಾರರೇ ನಿರ್ಣಾಯಕ ಎಂಬುದು ವಿಶೇಷ.
ಇತ್ತೀಚಿನ ದಿನಗಳಲ್ಲಿ ಸಮಾಜದ ಎಲ್ಲ ಸ್ತರಗಳಲ್ಲೂ ತಮ್ಮ ಇರುವಿಕೆ ಸಾಬೀತುಪಡಿಸಿರುವ ಮಹಿಳೆಯರು, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆ ಮೂಲಕ ಯಾವುದೇ ಅಭ್ಯರ್ಥಿಯ ಗೆಲುವಿಗೆ ಪುರುಷ ಮತದಾರರಿಗಿಂತಲೂ ಮಹಿಳಾ ಮತದಾರರೇ ಪ್ರಮುಖ ಪಾತ್ರವಹಿಸಲಿದ್ದಾರೆ. ಮೈಸೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳಾದ ಪಿರಿಯಾಪಟ್ಟಣ, ಹುಣಸೂರು, ಚಾಮುಂಡೇಶ್ವರಿ, ಚಾಮರಾಜ, ಕೃಷ್ಣರಾಜ, ನರಸಿಂಹರಾಜ, ಮಡಿಕೇರಿ ಹಾಗೂ ವಿರಾಜಪೇಟೆ ಕ್ಷೇತ್ರಗಳಿಗೆ ಹೋಲಿಸಿದರೆ ಮೈಸೂರು ನಗರ ಹಾಗೂ ತಾಲೂಕು ವ್ಯಾಪ್ತಿಯನ್ನೊಳಗೊಂಡ ಚಾಮುಂಡೇಶ್ವರಿಯಲ್ಲಿ ಹೆಚ್ಚು ಮಹಿಳಾ ಮತದಾರರಿದ್ದರೆ, ಪಿರಿಯಾಪಟ್ಟಣದಲ್ಲಿ ಕಡಿಮೆ ಸಂಖ್ಯೆ ಮಹಿಳಾ ಮತದಾರರಿದ್ದಾರೆ.
೨೦೨೪ರ ಮಾರ್ಚ್ ೧೫ರ ಅಂತ್ಯದ ನೊಂದಣಿ ಪ್ರಕಾರ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ೨೦೭೨೩೩೭ ಮತದಾರರಿದ್ದಾರೆ. ಈ ಪೈಕಿ ೨೦೨೪ರ ಜನವರಿ ೨೧ರಿಂದ ಮಾರ್ಚ್ ೧೫ರವರೆಗಿನ ಅವಧಿ ನಡುವೆ ೧೭೭೯೯ ಮಂದಿ ಹೊಸ ಮತದಾರರ ಸೇರ್ಪಡೆಯಾಗಿದೆ. ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ೨೩೬೫೬೨ ಮತದಾರರಿದ್ದು, ಆ ಪೈಕಿ ೧೧೫೧೫೯ ಪುರುಷರು, ೧೨೧೩೯೪ ಮಹಿಳೆಯರು ಹಾಗೂ ೯ ಮಂದಿ ಇತರರು ಇದ್ದಾರೆ. ಅಂದರೆ, ಸದರಿ ಕ್ಷೇತ್ರದಲ್ಲಿ ಪುರುಷರಿಗಿಂತ ೬೨೩೫ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.
ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ೨೨೯೫೯೨ ಮತದಾರರಿದ್ದು, ಆ ಪೈಕಿ ೧೧೩೩೧೯ ಪುರುಷರು, ೧೧೬೨೬೬ ಮಹಿಳೆಯರು ಹಾಗೂ ೭ ಮಂದಿ ಇತರರು ಇದ್ದಾರೆ. ಅಂದರೆ, ಸದರಿ ಕ್ಷೇತ್ರದಲ್ಲಿ ಪುರುಷರಿಗಿಂತ ೨೯೪೭ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.
ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ೧೯೭೨೧೫ ಮತದಾರರಿದ್ದು, ಆ ಪೈಕಿ ೯೮೪೪೭ ಪುರುಷರು, ೯೮೭೬೪ ಮಹಿಳೆಯರು ಹಾಗೂ ೪ ಮಂದಿ ಇತರರು ಇದ್ದಾರೆ. ಅಂದರೆ, ಸದರಿ ಕ್ಷೇತ್ರದಲ್ಲಿ ಪುರುಷರಿಗಿಂತ ೩೧೭ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.
ಹುಣಸೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ೨೪೬೫೦೮ ಮತದಾರರಿದ್ದು, ಆ ಪೈಕಿ ೧೨೨೨೮೪ ಪುರುಷರು, ೧೨೪೨೦೮ ಮಹಿಳೆಯರು ಹಾಗೂ ೧೬ ಮಂದಿ ಇತರರು ಇದ್ದಾರೆ. ಅಂದರೆ, ಸದರಿ ಕ್ಷೇತ್ರದಲ್ಲಿ ಪುರುಷರಿಗಿಂತ ೧೯೨೪ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.
ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ೩೪೫೩೨೦ ಮತದಾರರಿದ್ದು, ಆ ಪೈಕಿ ೧೭೧೦೯೦ ಪುರುಷರು, ೧೭೪೧೯೬ ಮಹಿಳೆಯರು ಹಾಗೂ ೩೪ ಮಂದಿ ಇತರರು ಇದ್ದಾರೆ. ಅಂದರೆ, ಸದರಿ ಕ್ಷೇತ್ರದಲ್ಲಿ ಪುರುಷರಿಗಿಂತ ೩೧೦೬ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.
ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ೨೫೫೬೧೫ ಮತದಾರರಿದ್ದು, ಆ ಪೈಕಿ ೧೨೪೪೧೯ ಪುರುಷರು, ೧೩೧೧೬೮ ಮಹಿಳೆಯರು ಹಾಗೂ ೨೮ ಮಂದಿ ಇತರರು ಇದ್ದಾರೆ. ಅಂದರೆ, ಸದರಿ ಕ್ಷೇತ್ರದಲ್ಲಿ ಪುರುಷರಿಗಿಂತ ೬೭೪೯ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.
ಚಾಮರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ೨೫೪೯೨೫ ಮತದಾರರಿದ್ದು, ಆ ಪೈಕಿ ೧೨೪೮೯೭ ಪುರುಷರು, ೧೨೯೯೯೬ ಮಹಿಳೆಯರು ಹಾಗೂ ೩೨ ಮಂದಿ ಇತರರು ಇದ್ದಾರೆ. ಅಂದರೆ, ಸದರಿ ಕ್ಷೇತ್ರದಲ್ಲಿ ಪುರುಷರಿಗಿಂತ ೫೦೯೯ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.
ನರಸಿಂಹರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ೩೦೬೬೦೦ ಮತದಾರರಿದ್ದು, ಆ ಪೈಕಿ ೧೪೭೫೦೫ ಪುರುಷರು, ೧೫೯೦೪೩ ಮಹಿಳೆಯರು ಹಾಗೂ ೫೨ ಮಂದಿ ಇತರರು ಇದ್ದಾರೆ. ಅಂದರೆ, ಸದರಿ ಕ್ಷೇತ್ರದಲ್ಲಿ ಪುರುಷರಿಗಿಂತ ೧೧,೫೩೮ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.
ಒಟ್ಟಾರೆ, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ೮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪೈಕಿ ಮೈಸೂರು ನಗರ ವ್ಯಾಪ್ತಿಯ ನರಸಿಂಹರಾಜ ವಿಧಾನಸಭಾ ಕ್ಷೇತ್ರದಲ್ಲಿ ಮಹಿಳಾ ಮತದಾರರು ಪುರುಷರಿಗಿಂತ ೧೧೫೩೮ ಹೆಚ್ಚಾಗಿದ್ದರೆ, ನಂತರದ ಸ್ಥಾನದಲ್ಲಿ ಕೃಷ್ಣರಾಜ ಕ್ಷೇತ್ರದಲ್ಲಿ ೬೭೪೯ ಮಹಿಳಾ ಮತದಾರರು ಇದ್ದಾರೆ. ಕೊನೆಯ ಸ್ಥಾನದಲ್ಲಿ ಪಿರಿಯಾಪಟ್ಟಣ ಕ್ಷೇತ್ರದಲ್ಲಿ ಮಹಿಳಾ ಮತದಾರರು ೩೧೭ ಮಂದಿ ಹೆಚ್ಚಾಗಿದ್ದಾರೆ.
=================
ಬಾಕ್ಸ್:-
ಒಟ್ಟು ಮತದಾರರು: ೨೦೭೨೩೩೭
ಪುರುಷರು: ೧೦೧೭೧೨೦
ಮಹಿಳೆಯರು: ೧೦೫೫೦೩೫
ಯುವ ಮತದಾರರು : ೪೧೧೪೫
ಪುರುಷರು: ೨೧೩೬೯
ಮಹಿಳೆಯರು: ೧೯೭೭೫
ಇತರೆ: ೧
ಒಟ್ಟು ಮತಗಟ್ಟೆಗಳು: ೨೨೦೨
ಆಕ್ಸಿಲರಿ ಮತಗಟ್ಟೆಗಳು: ೧೦