ಪ್ರತಿನಿಧಿ ವರದಿ ಮೈಸೂರು
ಯಕ್ಷರಂಗ ತಂಡದಿಂದ ಏ.೭ರಂದು ಏಳು ಸಮುದ್ರದಾಚೆ ಮೂಡಲಪಾಯ ಯಕ್ಷಗಾನ ಪ್ರದರ್ಶನ ಆಯೋಜಿಸಲಾಗಿದೆ ಎಂದು ನಿರ್ದೇಶಕ ಡಿ.ತಿಪ್ಪಣ್ಣ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ರಾಮಕೃಷ್ಣನಗರದ ರಮಾಗೋವಿಂದ ರಂಗಮಂದಿರದಲ್ಲಿ ಸಂಜೆ ೬.೩೦ಕ್ಕೆ ಯಕ್ಷಗಾಯ ಪ್ರದರ್ಶನ ನಡೆಯಲಿದ್ದು, ಧರ್ಮೇಗೌಡನಪಾಳ್ಯದ ಭೀಮಯ್ಯ ಅವರ ಭಾಗವತಿಗೆಯಲ್ಲಿ, ಡಿ.ಅಶ್ವತ್ಥ್ ಕದಂಬ ವಸ್ತ್ರಾಲಂಕಾರ ನಿರ್ವಹಿಸಿದ್ದಾರೆ. ಜಾನಪದ ವಿದ್ವಾಂಸ ಕಾಳೇಗೌಡ ನಾಗವಾರ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಮೂಡಲಪಾಯ ಯಕ್ಷಗಾನ ಕಲೆ ನಶಿಸುತ್ತಿದ್ದು, ಅದನ್ನು ಸಂರಕ್ಷಿಸಬೇಕಾದ ಅಗತ್ಯವಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ರಂಗಕರ್ಮಿ, ಯು.ಎಸ್.ರಾಮಣ್ಣ, ಪವಿತ್ರಾ ಫಣಿ ಇದ್ದರು.
=================
ನಾಳೆ ಎಸ್ಪಿಬಿ ಸ್ಮರಣಾರ್ಥ ಗಾಯನ
ಪ್ರತಿನಿಧಿ ವರದಿ ಮೈಸೂರು
ನಿನಾದ ಮ್ಯೂಸಿಕಲ್ ಟ್ರಸ್ಟ್ ಮತ್ತು ಪ್ರಸನ್ನ ಫಿಲ್ಮ್ ಹಿಟ್ಸ್ನಿಂದ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಸ್ಮರಣಾರ್ಥ ಏ.೬ರಂದು ಗೀತ ಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಟ್ರಸ್ಟ್ ಸಂಸ್ಥಾಪಕ ಎ.ಎಸ್.ಪ್ರಸನ್ನ ಕುಮಾರ್ ತಿಳಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ ೫ರಿಂದ ಜಗನ್ಮೋಹನ ಅರಮನೆಯಲ್ಲಿ ಗೀತ ಗಾಯನ ಕಾರ್ಯಕ್ರಮ ನಡೆಯಲಿದ್ದು, ಟ್ರಸ್ಟ್ನ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಕಲಾವಿದರು ಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಇದೇ ಸಂದರ್ಭದಲ್ಲಿ ಗಾಯಕರಾದ ಅಮೂಲ್ಯ, ಸುದರ್ಶನ್ ಅವರನ್ನು ಸನ್ಮಾನಿಸಲಾಗುವುದು. ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದೆ ಎಂದರು. ಗೋಷ್ಠಿಯಲ್ಲಿ ಗಾಯಕರಾದ ಜಯರಾಜ್, ಶ್ರೀಧರ್, ಡಾ.ರೇಖಾ, ಗುರುರಾಜ್ ಇದ್ದರು.
=================
ಏ.21ಕ್ಕೆ ಶ್ರವಣ ತಪಾಸಣೆ ಚಿಕಿತ್ಸಾ ಶಿಬಿರ
ಪ್ರತಿನಿಧಿ ವರದಿ ಮೈಸೂರು
ನಗರದ ರೆಸೋನೆನ್ಸ್ ವಾಕ್ ಮತ್ತು ಶ್ರವಣ ಕ್ಲಿನಿಕ್ನಿಂದ ಏ.೨೧ರಂದು ಬೆಳಗ್ಗೆ ೧೦ರಿಂದ ಸಂಜೆ ೪ರವರೆಗೆ ಶ್ರವಣ ತಪಾಸಣೆ ಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ ಎಂದು ಆಸ್ಪತ್ರೆಯ ಶ್ರವಣ ತಜ್ಞೆ ನಯನಾ ತಿಳಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸ್ಥೆಯ ವಿಜಯನಗರ ಮತ್ತು ಕುವೆಂಪುನಗರದಲ್ಲಿನ ಶಾಖೆಗಳಲ್ಲಿ ಶ್ರವಣ ತಪಾಸಣಾ ಚಿಕಿತ್ಸಾ ಶಿಬಿರ ನಡೆಯಲಿದ್ದು, ಏ.೨೨ರಿಂದ ೨೬ರವರೆಗೆ ಶ್ರವಣ ಸಾಧನ ಧರಿಸುವವರಿಗೆ ರಿಯಲ್ ಇಯರ್ ಮೆಜರ್ಮೆಂಟ್ ಕೂಡ ನಡೆಯಲಿದೆ. ಮಾಹಿತಿ ಮತ್ತು ನೋಂದಣಿಗೆ ೮೦೫೦೦೫೫೧೩೩, ೯೦೩೫೩೮೩೭೩೫ನ್ನು ಸಂಪರ್ಕಿಸಬಹುದು ಎಂದರು. ಸುದ್ದಿಗೋಷ್ಠಿಯಲ್ಲಿ ಆಸ್ಪತ್ರೆಯ ಸ್ಥಾಪಕ ಆದಿತ್ಯ ಸಿಬ್ಬಂದಿ ಪವನ್, ಶರಣ್ಯಾ ಇದ್ದರು.
==================
6 ಮತ್ತು 7ರಂದು ಕ್ರಿಕೆಟ್ ಪಂದ್ಯಾವಳಿ
ಪ್ರತಿನಿಧಿ ವರದಿ ಮೈಸೂರು
ಎಡಿನ್ ಬ್ರಿಡ್ಜ್ ಫೌಂಡೇಶನ್ ಮತ್ತು ಮೈಸೂರು ಎಚ್ಆರ್ ಫೋರಂ ಸಂಸ್ಥೆಯಿಂದ ಏ.೬ ಮತ್ತು ೭ರಂದು ಎನ್ಐಇ ಮೈಸೂರು ಎಡಿನ್ ಕ್ರಿಕೆಟ್ ಲೀಗ್ನ ಅಂತಿಮ ಪಂದ್ಯಗಳು ನಡೆಯಲಿದೆ ಎಂದು ಎಂ. ಫಣೀಶ್ ತಿಳಿಸಿದರು. ನಗರದ ಹೂಟಗಳ್ಳಿ ಕೈಗಾರಿಕಾ ಪ್ರದೇಶದ ಎನ್ಐಇ ನಾರ್ತ್ ಕ್ರಿಕೆಟ್ ಮೈದಾನದಲ್ಲಿ ಪಂದ್ಯಗಳು ನಡೆಯಲಿದ್ದು, ಏ.೬ರಂದು ಬೆಳಗ್ಗೆ ೧೦ಕ್ಕೆ ಭಾರತೀಯ ರಾಷ್ಟ್ರೀಯ ಅಂಧರ ಕ್ರಿಕೆಟ್ ತಂಡದ ಮಾಜಿ ನಾಯಕ ಶೇಖರ್ ನಾಯ್ಕ್ ಅವರು ಪಂದ್ಯಾವಳಿ ಉದ್ಘಾಟಿಸಲಿದ್ದಾರೆ.
ಈ ವೇಳೆ ಶೇಖರ್ ನಾಯ್ಕ್ ಫೌಂಡೇಶನ್ ಮತ್ತು ವಿಶ್ಬಾಕ್ಸ್ ಸಂಸ್ಥೆಗೆ ಟೂರ್ನಿ ಉದ್ದೇಶದ ಭಾಗವಾಗಿ ೪೫ ಸಾವಿರ ರೂ. ಸಹಾಯ ಧನ ನೀಡಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಫೋರ್ ಫ್ರಂಟ್ ಹೆಲ್ತ್ ಕೇರ್ ಸಂಸ್ಥೆಯ ಎಚ್ಆರ್ ಸೂರಜ್, ಅರಸ್ ಕಾರ್ ಸಂಸ್ಥೆಯ ಮಾರಾಟ ವಿಭಾಗದ ವ್ಯವಸ್ಥಾಪಕ ಕಿಶನ್, ಟಾಟಾ ಮೋಟಾರ್ಸ್ ಮಾರಾಟ ವಿಭಾಗದ ವ್ಯವಸ್ಥಾಪಕ ಮೇದಪ್ಪ ಇದ್ದರು.