ಪ್ರತಿನಿಧಿ ವರದಿ ಹೊಳೆನರಸೀಪುರ
ದೇಹ ಮತ್ತು ಮನಸ್ಸಿನ ಆರೋಗ್ಯ ಕಾಪಾಡಿಕೊಳ್ಳಲು ಯೋಗಾಸನ ಅತ್ಯಂತ ಪರಿಣಾಮಕಾರಿ ಎಂದು ಯೋಗಗುರು ಎಚ್.ಕೆ.ನರಸಿಂಹ ತಿಳಿಸಿದರು.
ಪಟ್ಟಣದ ಪ್ರಿಯದರ್ಶಿನಿ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜು ವತಿಯಿಂದ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿ ವಿದ್ಯಾರ್ಥಿಯು ತಮ್ಮ ಪೋಷಕರೊಂದಿಗೆ ಯೋಗಾಭ್ಯಾಸವನ್ನು ನಿತ್ಯ ಮಾಡುವುದರಿಂದ ಯಾವುದೇ ರೋಗ ರುಜಿನಗಳು ಹತ್ತಿರಕ್ಕೂ ಸುಳಿಯದಿಲ್ಲ ಎಂದರು.
ಯೋಗ ಶಿಬಿರದಲ್ಲಿ ಸುಮಾರು ಎಂಟು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದ, ಹಲವು ಆಸನಗಳನ್ನು ಪ್ರದರ್ಶಿಸಿದರು. ಆಸನಗಳಿಂದ ದೊರೆಯುವ ಪ್ರಯೋಜದ ಬಗ್ಗೆ ಸವಿಸ್ತಾರವಾಗಿ ಗುರೂಜಿಗಳು ತಿಳಿಸಿದರು.
ಯೋಗ ಡೇ ಮತ್ತು ಪ್ರಿಯದರ್ಶಿನಿ ಸ್ಕೂಲ್ ಎಂಬ ಆಕಾರದ ಅಕ್ಷರದ ಮೇಲೆ ನಿಲ್ಲಿಸಿ ಯೋಗ ಪ್ರಾರಂಭ ಮಾಡಿದ್ದು ವಿಶೇಷವಾಗಿತ್ತು. ಯೋಗ ಗುರೂಜಿಗಳಾದ ಎಚ್.ಕೆ.ನರಸಿಂಹ ಮತ್ತು ದೇವರಾಜಣ್ಣ ಅವರನ್ನು ಶಾಲೆಯ ವತಿಯಿಂದ ಗೌರವಿಸಲಾಯಿತು. ಪ್ರದರ್ಶನದಲ್ಲಿ ಶಾಲೆಯ ಮುಖ್ಯಸ್ಥರು, ಶಿಕ್ಷಕ, ಶಿಕ್ಷಕಿಯರು, ಶಾಲೆಯ ಸಿಬ್ಬಂದಿ ಭಾಗವಹಿದ್ದರು.